
ಪಿಟಿಐ
ನವದೆಹಲಿ: ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಷೇರಿನ ಮೌಲ್ಯ ಸೋಮವಾರದ ವಹಿವಾಟಿನಲ್ಲಿ ಶೇ 3.35ರಷ್ಟು ಕುಸಿದಿದೆ. ಪ್ರತಿ ಷೇರಿನ ಮೌಲ್ಯ ₹4,440.90 ಆಗಿದೆ.
ಎಚ್‌ಎಎಲ್ ನಿರ್ಮಿಸಿದ ತೇಜಸ್ ಯುದ್ಧ ವಿಮಾನವು ಕಳೆದ ವಾರ ದುಬೈನಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಅಪಘಾತಕ್ಕೆ ಒಳಗಾಯಿತು.
ಇದರಿಂದಾಗಿ ಸೋಮವಾರದ ವಹಿವಾಟಿನಲ್ಲಿ ಕಂಪನಿಯ ಷೇರಿನ ಮೌಲ್ಯ ಇಳಿದಿದೆ. ವಹಿವಾಟಿನ ನಡುವಿನಲ್ಲಿ ಶೇ 8.48ರವರೆಗೂ ಷೇರುಮೌಲ್ಯ ಕುಸಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.