ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿ ಸುಂಕ ನೀತಿ ಘೋಷಣೆಯಿಂದಾಗಿ ಇದುವರೆಗೆ ದೇಶದ ಷೇರು ಸೂಚ್ಯಂಕಗಳು ಶೇ 2ರಷ್ಟು ಕುಸಿದಿದ್ದು, ಹೂಡಿಕೆದಾರರು ಸಂಪತ್ತು ₹11.30 ಲಕ್ಷ ಕೋಟಿಯಷ್ಟು ಕರಗಿದೆ.
ಏಪ್ರಿಲ್ 2ರಿಂದ 11ರ ವರೆಗೆ ಸೆನ್ಸೆಕ್ಸ್ 1,460 ಅಂಶ ಮತ್ತು ನಿಫ್ಟಿ 504 ಅಂಶ ಇಳಿಕೆಯಾಗಿದೆ. ಬಿಎಸ್‌ಇ ನೋಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ₹401 ಲಕ್ಷ ಕೋಟಿಗೆ ಇಳಿದಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಏಪ್ರಿಲ್ 2ರಂದು ಅಮೆರಿಕ, ಭಾರತದ ಸರಕುಗಳ ರಫ್ತಿನ ಮೇಲೆ ಶೇ 26ರಷ್ಟು ಪ್ರತಿ ಸುಂಕ ವಿಧಿಸುವುದಾಗಿ ಘೋಷಿಸಿತ್ತು. ಆದರೆ, ಏಪ್ರಿಲ್ 9ರಂದು ಪ್ರತಿ ಸುಂಕಕ್ಕೆ 90 ದಿನ ವಿರಾಮ ನೀಡುವುದಾಗಿ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.