ADVERTISEMENT

ಇಂದು ಷೇರುಪೇಟೆಯಲ್ಲಿ ಐಆರ್‌ಸಿಟಿಸಿ ವಹಿವಾಟು

ಪಿಟಿಐ
Published 13 ಅಕ್ಟೋಬರ್ 2019, 19:45 IST
Last Updated 13 ಅಕ್ಟೋಬರ್ 2019, 19:45 IST
   

ನವದೆಹಲಿ: ಕೇಂದ್ರ ಸರ್ಕಾರಿ ಒಡೆತನದ ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಷೇರುಗಳ ವಹಿವಾಟಿಗೆ ಸೋಮವಾರ ಚಾಲನೆ ಸಿಗಲಿದೆ.

ಷೇರುಗಳ ‘ಬಿ’ ಸಮೂಹದಲ್ಲಿ ‘ಐಆರ್‌ಸಿಟಿಸಿ‘ ಷೇರುಗಳು ವಹಿವಾಟು ನಡೆಸಲಿವೆ ಎಂದು ಮುಂಬೈ ಷೇರು‍ಪೇಟೆ ಪ್ರಕಟಣೆಯಲ್ಲಿ ತಿಳಿಸಿದೆ.

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ₹ 645 ಕೋಟಿ ಸಂಗ್ರಹಿಸಲಾಗಿದೆ.₹10ರ ಮುಖಬೆಲೆಯ ₹ 2.01 ಕೋಟಿ ಷೇರುಗಳನ್ನು ಮಾರಾಟಕ್ಕೆ ಇಡಲಾಗಿತ್ತು.

ADVERTISEMENT

ಯೆಸ್‌ ಸೆಕ್ಯುರಿಟೀಸ್‌, ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್ಸ್‌ ಮತ್ತು ಐಡಿಬಿಐ ಕ್ಯಾಪಿಟಲ್‌ ಮಾರ್ಕೆಟ್ಸ್‌ ಆ್ಯಂಡ್‌ ಸೆಕ್ಯುರಿಟೀಸ್‌ ಈ ‘ಐಪಿಒ’ದ ನಿರ್ವಹಣೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.