ADVERTISEMENT

ಲಾರ್ಸೆನ್ ಆ್ಯಂಡ್ ಟೊಬ್ರೊ ಷೇರುಬೆಲೆ ₹4,200ಕ್ಕೆ ತಲುಪಬಹುದು;ಮೋತಿಲಾಲ್‌ ಓಸ್ವಾಲ್

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 21:17 IST
Last Updated 17 ಸೆಪ್ಟೆಂಬರ್ 2025, 21:17 IST
.
.   

ದೇಶದಲ್ಲಿ ಎಂಜಿನಿಯರಿಂಗ್ ಮತ್ತು ಮೂಲಸೌಕರ್ಯ ನಿರ್ಮಾಣ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಲಾರ್ಸೆನ್ ಆ್ಯಂಡ್ ಟೊಬ್ರೊ (ಎಲ್‌ ಆ್ಯಂಡ್‌ ಟಿ) ಷೇರಿನ ಬೆಲೆ ₹4,200ಕ್ಕೆ ತಲುಪಬಹುದು ಎಂದು ಬ್ರೋಕರೇಜ್‌ ಸಂಸ್ಥೆ ಮೋತಿಲಾಲ್‌ ಓಸ್ವಾಲ್ ಹೇಳಿದೆ.

ಎಲ್‌ ಆ್ಯಂಡ್‌ ಟಿಯು ₹2,500 ಕೋಟಿಯಿಂದ ₹5 ಸಾವಿರ ಕೋಟಿವರೆಗಿನ ಮೊತ್ತದ ಎರಡು ದೊಡ್ಡ ಕಾರ್ಯಾದೇಶಗಳನ್ನು ಪಡೆದಿದೆ. ಇವು ದೇಶದ ಮೂಲಸೌಕರ್ಯ ವಲಯದ ಪ್ರಮುಖ ಕ್ಷೇತ್ರಗಳು.

ಇಷ್ಟೇ ಅಲ್ಲದೆ ಕಂಪನಿಯು, ನಾಗರಿಕ ಅಣುಶಕ್ತಿ ಕೆಲಸಗಳಿಗೆ ಸಂಬಂಧಿಸಿದ ಕೆಲಸವೊಂದಕ್ಕಾಗಿ ಎನ್‌ಪಿಸಿಐಎಲ್‌ನಿಂದ ₹1 ಸಾವಿರ ಕೋಟಿಯಿಂದ ₹2,500 ಕೋಟಿ ಮೊತ್ತದ ಕಾರ್ಯಾದೇಶ ಪಡೆದಿದೆ. ಇದು ಮಹತ್ವದ ಮೂಲಸೌಕರ್ಯ ಮತ್ತು ಸರ್ಕಾರದ ಪ್ರಮುಖ ಬಂಡವಾಳ ವೆಚ್ಚದ ಯೋಜನೆಗಳನ್ನು ನಿಭಾಯಿಸುವಲ್ಲಿ ಕಂಪನಿಯು ಹೊಂದಿರುವ ಪ್ರಬಲ ಸ್ಥಾನವನ್ನು ತಿಳಿಸುತ್ತದೆ ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ.

ADVERTISEMENT

ಕೊಲ್ಲಿ ಸಹಕಾರ ವಲಯದಲ್ಲಿ (ಜಿಸಿಸಿ) ಕಂಪನಿಯು ವಿಸ್ತರಣೆ ಕಂಡಿರುವುದರಿಂದ ವರಮಾನ ಮೂಲಗಳು ಹೆಚ್ಚುತ್ತವೆ. 2024–25ನೇ ಹಣಕಾಸು ವರ್ಷದಿಂದ 2027–28ನೇ ಹಣಕಾಸು ವರ್ಷದವರೆಗೆ ಕಂಪನಿಯ ತೆರಿಗೆ ನಂತರದ ಲಾಭದ (ಪಿಎಟಿ) ವಾರ್ಷಿಕ ಸಂಯುಕ್ತ ಬೆಳವಣಿಗೆ ದರವು (ಸಿಎಜಿಆರ್) ಶೇ 20ರಷ್ಟಿರಲಿದೆ ಎಂದು ಬ್ರೋಕರೇಜ್ ಸಂಸ್ಥೆ ಅಂದಾಜು ಮಾಡಿದೆ ಹೇಳಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಕಂಪನಿಯ ಷೇರಿನ ಮೌಲ್ಯವು ₹3,685.10 ಆಗಿತ್ತು. 

(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.