ADVERTISEMENT

ಕೋವಿಡ್‌: ಹೂಡಿಕೆದಾರರಲ್ಲಿ ಆತಂಕ

ಪಿಟಿಐ
Published 21 ಡಿಸೆಂಬರ್ 2022, 21:00 IST
Last Updated 21 ಡಿಸೆಂಬರ್ 2022, 21:00 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಚೀನಾದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಹೂಡಿಕೆದಾರರನ್ನು ಆತಂಕಕ್ಕೆ ದೂಡಿದೆ. ಇದರಿಂದಾಗಿ ದೇಶದ ಷೇರುಪೇಟೆಗಳಲ್ಲಿ ಬುಧವಾರ ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 635 ಅಂಶ ಇಳಿಕೆ ಕಂಡು 61,067 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 186 ಅಂಶ ಇಳಿಕೆಯಾಗಿ 18,199 ಅಂಶಗಳಿಗೆ ತಲುಪಿತು.

ಸೆನ್ಸೆಕ್ಸ್‌ನಲ್ಲಿ ಇಂಡಸ್‌ಇಂಡ್‌ ಬ್ಯಾಂಕ್‌ ಷೇರು ಮೌಲ್ಯ ಶೇ 2.28ರಷ್ಟು ಗರಿಷ್ಠ ನಷ್ಟ ಕಂಡರೆ, ಸನ್ ಫಾರ್ಮಾ ಶೇ 1.67ರಷ್ಟು ಗಳಿಕೆ ಕಂಡಿತು. ಬಿಎಸ್‌ಇ ಸ್ಮಾಲ್‌ಕ್ಯಾಪ್‌ ಶೇ 2.18ರಷ್ಟು ಇಳಿಕೆ ಕಂಡರೆ, ಮಿಡ್‌ಕ್ಯಾಪ್‌ ಶೇ 1.40ರಷ್ಟು ಇಳಿಕೆ ಕಂಡಿತು.

ADVERTISEMENT

‘ದೇಶಿ ಷೇರುಪೇಟೆಯಲ್ಲಿ ಕರಡಿ ಕುಣಿತವು ಹಾನಿ ಉಂಟುಮಾಡುವುದನ್ನು ಮುಂದುವರಿಸಿದೆ. ಅಮೆರಿಕದ ಜಿಡಿಪಿ ಅಂಕಿ–ಅಂಶ ಬಿಡುಗಡೆಗೂ ಮೊದಲೇ ವಾಲ್‌ ಸ್ಟ್ರೀಟ್‌ನಲ್ಲಿ ಇಳಿಮುಖ ವಹಿವಾಟು ನಡೆಯಿತು. ಉಳಿದೆಲ್ಲ ವಲಯಗಳು ಕುಸಿತ ಕಂಡರೂ ಜಾಗತಿಕವಾಗಿ ಕೋವಿಡ್‌ ಸಾಂಕ್ರಾಮಿಕವು ಮತ್ತೆ ಹೆಚ್ಚಾಗುವ ಆತಂಕ ಎದುರಾಗಿರುವುದರಿಂದ ಔಷಧ ವಲಯದ ಷೇರುಗಳು ಮಾತ್ರ ಉತ್ತಮ ಗಳಿಕೆ ಕಂಡುಕೊಂಡವು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

‘ಔಷಧ ಮತ್ತು ಡಯಾಗ್ನಾಸ್ಟಿಕ್ಸ್‌ಬುಧವಾರದ ವಹಿವಾಟಿನಲ್ಲಿ ಹೆಚ್ಚು ಗಳಿಕೆ ಕಂಡವು. ಮುಂದಿನ ದಿನಗಳಲ್ಲಿಯೂ ಗಳಿಕೆಯು ಇದೇ ರೀತಿಯಲ್ಲಿ ಇರುವ ನಿರೀಕ್ಷೆ ಮಾಡಲಾಗಿದೆ. ಇನ್ನೊಂದೆಡೆ, ಪ್ರಯಾಣ ಮತ್ತು ಪ್ರವಾಸ, ಹೋಟೆಲ್‌, ವಿಮಾನಯಾನ, ಮನರಂಜನೆ ಮತ್ತು ರಿಟೇಲ್‌ ವಲಯಗಳು ಒತ್ತಡ ಎದುರಿಸುವ ಸಾಧ್ಯತೆ ಇದೆ’ ಎಂದು ಮೋತಿಲಾಲ್‌ ಓಸ್ವಾಲ್ ಫೈನಾನ್ಶಿಯಲ್‌ ಸರ್ವೀಸಸ್‌ನ ರಿಟೇಲ್‌ ರಿಸರ್ಚ್‌ನ ಮುಖ್ಯಸ್ಥ ಸಿದ್ದಾರ್ಥ್‌ ಖೇಮ್ಕಾ ತಿಳಿಸಿದ್ದಾರೆ.

ಬ್ರೆಂಟ್ ಕಚ್ಚಾ ತೈಲ ದರ ಶೇ 1.08ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ ₹80.85 ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.