ADVERTISEMENT

ಎಂಎಫ್‌: ಮಾರ್ಚ್‌ನಲ್ಲಿ ಷೇರುಗಳ ಮೇಲೆ ₹ 2,476 ಕೋಟಿ ಹೂಡಿಕೆ

ಪಿಟಿಐ
Published 4 ಏಪ್ರಿಲ್ 2021, 15:48 IST
Last Updated 4 ಏಪ್ರಿಲ್ 2021, 15:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಮ್ಯೂಚುವಲ್ ಫಂಡ್‌ ಸಂಸ್ಥೆಗಳು ಮಾರ್ಚ್ ತಿಂಗಳಿನಲ್ಲಿ ₹ 2,476 ಕೋಟಿ ಮೊತ್ತವನ್ನು ಷೇರುಗಳ ಖರೀದಿಗೆ ಹೂಡಿಕೆ ಮಾಡಿವೆ.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯಲ್ಲಿ (ಸೆಬಿ) ಇರುವ ಮಾಹಿತಿಯ ಪ್ರಕಾರ, 2020ರ ಜೂನ್‌ನಿಂದ 2021ರ ಫೆಬ್ರುವರಿ ತಿಂಗಳವರೆಗೂ ಮ್ಯೂಚುವಲ್ ಫಂಡ್‌ಗಳು ಷೇರುಪೇಟೆಯಿಂದ ಬಂಡವಾಳ ಹಿಂದಕ್ಕೆ ಪಡೆದಿದ್ದವು.

ಮಾರುಕಟ್ಟೆಯ ಬಲವರ್ಧನೆಯು ನಿಧಿ ನಿರ್ವಾಹಕರಿಗೆ ಹೂಡಿಕೆ ಅವಕಾಶಗಳನ್ನು ಒದಗಿಸಿಕೊಟ್ಟಿದ್ದರಿಂದ ಈ ಪ್ರಮಾಣದ ಬಂಡವಾಳ ಹರಿದುಬಂದಿದೆ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ಮುಂದಿನ ದಿನಗಳಲ್ಲಿ ಷೇರುಪೇಟೆಗಳಲ್ಲಿ ಮ್ಯೂಚುವಲ್ ಫ‍ಂಡ್‌ಗಳ ಹೂಡಿಕೆಯು ಮಂದಗತಿಯಲ್ಲಿ ಇರಲಿದೆ ಎಂದು ಇನ್‌ವೆಸ್ಟ್‌19 ಸಂಸ್ಥೆಯ ಸ್ಥಾಪಕ ಕುಶಲೇಂದ್ರ ಸಿಂಗ್‌ ಸೆಂಗರ್‌ ಹೇಳಿದ್ದಾರೆ.

ಭಾರತದ ಆರ್ಥಿಕ ಚೇತರಿಕೆ ವೇಗವಾಗಿರುವುದರಿಂದ ಭಾರತದ ಷೇರುಪೇಟೆಗಳಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ ಹೂಡಿಕೆದಾರರು ಎಫ್‌.ಡಿ. ಮತ್ತು ಚಿನ್ನದಂತಹ ಸಾಂಪ್ರದಾಯಿಕ ಸ್ವತ್ತುಗಳಿಗೆ ಬದಲಾಗಿ ಈಕ್ವಿಟಿಯಂತಹ ಹೆಚ್ಚಿನ ರಿಸ್ಕ್‌ ಇರುವ ಸ್ವತ್ತುಗಳಲ್ಲಿ ಹೂಡಿಕೆ ಮಾಡಲು ಗಮನ ಹರಿಸುತ್ತಿದ್ದಾರೆ ಎಂದು ಗ್ರೋವ್ ಸಂಸ್ಥೆಯ ಸಹ ಸ್ಥಾಪಕ ಹರ್ಷ್‌ ಜೈನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.