ಫೀನಿಕ್ಸ್ ಮಿಲ್ಸ್‌ನ ಷೇರುಮೌಲ್ಯವು ₹2,044ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಹೇಳಿದೆ.
ಲಖನೌ, ಇಂದೋರ್, ಅಹಮದಾಬಾದ್, ಪುಣೆ ಮತ್ತು ಬೆಂಗಳೂರಿನಲ್ಲಿ ಹೊಸ ಮಾಲ್‌ಗಳನ್ನು ನಿರ್ಮಿಸಿ ಕಂಪನಿಯು ತನ್ನ ನೆಲೆಯನ್ನು ವಿಸ್ತರಿಸಿದೆ. ಅಲ್ಲದೆ, ಐಎಸ್‌ಎಂಡಿಪಿಎಲ್ (ಐಲ್ಯಾಂಡ್ ಸ್ಟಾರ್ ಮಾಲ್ ಡೆವಲಪರ್ಸ್) ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿದೆ. ಈ ಉಪಕ್ರಮಗಳು ಫೀನಿಕ್ಸ್ ಮಿಲ್ಸ್ ಕಂಪನಿಯ ಪೋರ್ಟ್‌ಫೋಲಿಯೊ ಗಾತ್ರವನ್ನು 2029–30ನೇ ಹಣಕಾಸು ವರ್ಷದ ಹೊತ್ತಿಗೆ ದುಪ್ಪಟ್ಟುಗೊಳಿಸಲಿವೆ ಎಂದು ಮೋತಿಲಾಲ್ ಓಸ್ವಾಲ್ ಅಂದಾಜು ಮಾಡಿದೆ.
ಫೀನಿಕ್ಸ್ ಮಿಲ್ಸ್‌ನ ಕಚೇರಿ ಸ್ಥಳದ ಫೋರ್ಟ್‌ಫೋಲಿಯೊ 2026–27ನೇ ಹಣಕಾಸು ವರ್ಷಕ್ಕೆ ಮೊದಲು ನಾಲ್ಕು ಪಟ್ಟು ಹೆಚ್ಚಳ ಕಾಣುವ ನಿರೀಕ್ಷೆಯನ್ನು ಕಂಪನಿಯ ಆಡಳಿತದ ಚುಕ್ಕಾಣಿ ಹಿಡಿದವರು ಹೊಂದಿದ್ದಾರೆ. ಅಂದರೆ ವರಮಾನದ ವಾರ್ಷಿಕ ಸಂಯುಕ್ತ ಬೆಳವಣಿಗೆ ದರವು (ಸಿಎಜಿಆರ್) 2024–25ರಿಂದ 2026–27ರವರೆಗೆ ಶೇ 71ರಷ್ಟು ಇರಲಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಕಂಪನಿಯ ಷೇರುಮೌಲ್ಯವು ₹1,515.50 ಆಗಿತ್ತು.
(ಬ್ರೋಕರೇಜ್ ಕಂಪನಿಗಳು ನೀಡುವ ಮಾಹಿತಿ, ವಿವರಗಳಿಗೆ ಪತ್ರಿಕೆ ಹೊಣೆಯಲ್ಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.