ADVERTISEMENT

ಕೇಂದ್ರದ ಉತ್ತೇಜನ: ಷೇರುಪೇಟೆಯಲ್ಲಿ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 1:06 IST
Last Updated 27 ಮಾರ್ಚ್ 2020, 1:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ (ಪಿಟಿಐ): ಕೊರೊನಾ ವೈರಸ್‌ ಸೋಂಕು ಹರಡುವುದನ್ನು ನಿಯಂತ್ರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸತತ ಮೂರನೇ ದಿನವೂ ಸಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರ 1,411 ಅಂಶ ಜಿಗಿತ ಕಂಡು 29,946 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 323 ಅಂಶ ಹೆಚ್ಚಾಗಿ 8,641 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ಗರಿಷ್ಠ ಗಳಿಕೆ: ಇಂಡಸ್‌ಇಂಡ್‌ ಬ್ಯಾಂಕ್‌ ಷೇರು ಶೇ 46ರಷ್ಟು ಗರಿಷ್ಠ ಗಳಿಕೆ ಕಂಡಿತು. ಭಾರ್ತಿ ಏರ್‌ಟೆಲ್‌, ಎಲ್‌ಆ್ಯಂಡ್‌ಟಿ, ಬಜಾಜ್‌ ಫೈನಾನ್ಸ್‌, ಕೋಟಕ್ ಮಹೀಂದ್ರಾ, ಬಜಾಜ್‌ ಆಟೊ, ಎಚ್‌ಯುಎಲ್‌ ಮತ್ತು ಎಚ್‌ಡಿಎಫ್‌ಸಿ ಷೇರುಗಳು ಶೇ 10ರವರೆಗೂ ಏರಿಕೆಯಾಗಿವೆ.ವಲಯವಾರು ಬಿಎಸ್‌ಇನಲ್ಲಿ ಟೆಲಿಕಾಂ, ಭಾರಿ ಯಂತ್ರೋಪಕರಣ ಸರಕು, ಬ್ಯಾಂಕಿಂಗ್‌, ಫೈನಾನ್ಸ್‌, ರಿಯಲ್‌ ಎಸ್ಟೇಟ್ ಮತ್ತು ಎಫ್‌ಎಂಸಿಜಿ ಕಂಪನಿಗಳ ಷೇರುಗಳು ಶೇ 10ರವರೆಗೂ ಏರಿಕೆಯಾಗಿವೆ.

ಮಾರ್ಚ್‌ ತಿಂಗಳ ಸರ್ಕಾರಿ ಬಾಂಡ್‌ಗಳ ವಾಯಿದಾ ವಹಿವಾಟು ಗುರುವಾರ ಅಂತ್ಯವಾಗಿದ್ದರಿಂದ ವಹಿವಾಟು ಚಂಚಲವಾಗಿತ್ತು ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.