ADVERTISEMENT

ಅಮೆರಿಕದ ಡಾಲರ್ ಎದುರು ದಾಖಲೆ ಕುಸಿತ ಕಂಡ ರೂಪಾಯಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 5:43 IST
Last Updated 4 ಅಕ್ಟೋಬರ್ 2018, 5:43 IST
   

ಮುಂಬೈ: ಅಮೆರಿಕದ ಡಾಲರ್ ಮುಂದೆ ರೂಪಾಯಿ ಮೌಲ್ಯ ದಾಖಲೆ ಕುಸಿತ ಕಂಡಿದೆ.ದಿನದ ವಹಿವಾಟು ಆರಂಭವಾದಾಗ 73.34 ಆಗಿದ್ದ ರೂಪಾಯಿ ಮೌಲ್ಯ ಕೆಲವೇ ಹೊತ್ತಿನಲ್ಲಿ 73.77ಕ್ಕೆ ತಲುಪಿದೆ.

ತೈಲ ಆಮದು ಕಂಪನಿಗಳಿಂದ ಡಾಲರ್‍‍ಗೆ ಬೇಡಿಕೆ ಹೆಚ್ಚಿದ್ದು, ಕಚ್ಚಾ ತೈಲದ ಬೆಲೆ ಏರಿಕೆ ಕಂಡು ಬಂದ ಕಾರಣ ರೂಪಾಯಿ ಮೌಲ್ಯ ಕುಸಿದಿದೆ. ರೂಪಾಯಿ ವಿನಿಮಯ ದರ ಕುಸಿತವಾಗಿರುವುದು ಗಲ್ಫ್ ಕರೆನ್ಸಿ ಮೇಲೂ ಪ್ರಭಾವ ಬೀರಿದೆ. ಯುಎಇ ದಿರಹಂ ಇದೇ ಮೊದಲ ಬಾರಿ 20 ರೂಪಾಯಿ ದಾಟಿದೆ.

ಇರಾನ್‌ನಿಂದ ತೈಲ ವಹಿವಾಟು ಕಡಿಮೆಯಾಗಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ.ಕಚ್ಚಾ ತೈಲ ಬೆಲೆ ಬ್ಯಾರೆಲ್‍ಗೆ 85 ಡಾಲರ್ ದಾಟಿದ್ದು ರೂಪಾಯಿ ಮೌಲ್ಯಕ್ಕೆ ಹೊಡೆತವನ್ನುಂಟು ಮಾಡಿದೆ. ಬ್ರೈಟ್ ಕಚ್ಚಾ ತೈಲ ಬೆಲೆ 85.45 ಡಾಲರ್ ವರೆಗೆ ತಲುಪಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.