ADVERTISEMENT

ರೂಪಾಯಿ ಮೌಲ್ಯ ದಾಖಲೆಯ ಕುಸಿತ: ಮತ್ತಷ್ಟು ಬೀಳುತ್ತದೆಯೇ? ಪರಿಣಿತರು ಹೇಳುವುದಿಷ್ಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜನವರಿ 2026, 12:28 IST
Last Updated 23 ಜನವರಿ 2026, 12:28 IST
<div class="paragraphs"><p>ರೂಪಾಯಿ ಮೌಲ್ಯ ಏರಿಕೆ</p></div>

ರೂಪಾಯಿ ಮೌಲ್ಯ ಏರಿಕೆ

   

Credit: iStock Photo

ಬೆಂಗಳೂರು: ಅಮರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದ್ದು, ಇಂದು ದಾಖಲೆಯ 91.95ಕ್ಕೆ ತಲುಪಿದೆ. ಜಾಗತಿಕ ಉದ್ವಿಗ್ನತೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್ಐಐ) ನಿರಂತರವಾಗಿ ಷೇರುಗಳನ್ನು ಮಾರಾಟ ಮಾಡುತ್ತಿರುವುದು ಮತ್ತು ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಅನಿಶ್ಚಿತತೆಯು ದೇಶೀಯ ಕರೆನ್ಸಿ ಮೇಲೆ ಒತ್ತಡ ಹೆಚ್ಚಿಸಿವೆ ಎಂದು ವರದಿ ತಿಳಿಸಿದೆ.

ADVERTISEMENT

ಇವು ಪ್ರಮುಖ ಕಾರಣಗಳಾದರೆ, ಇನ್ನೂ ಹಲವು ವಿಚಾರಗಳು ಪರಿಣಾಮ ಬೀರಿವೆ ಎಂದು ಕೋಟಕ್ ಸೆಕ್ಯುರಿಟಿಸ್‌ನ ಕರೆನ್ಸಿ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಅನಿಂದ್ಯ ಬ್ಯಾನರ್ಜಿ ಎನ್‌ಡಿಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಈಕ್ವಿಟಿ ಮಾರುಕಟ್ಟೆಯಲ್ಲಿ ಶುಕ್ರವಾರ ಸಂಭವಿಸಿದ ದಿಢೀರ್ ಕುಸಿತವು ರೂಪಾಯಿ ಮೇಲೆ ಒತ್ತಡ ಬೀರಿದೆ. ಭಾರತದ ರೂಪಾಯಿಯು ಏಷ್ಯಾದ ದುರ್ಬಲ ಕರೆನ್ಸಿಗಳಲ್ಲಿ ಒಂದಾಗಿದೆ. ಆದ್ದರಿಂದ ಈಕ್ವಿಟಿ ಷೇರುಪೇಟೆಯಲ್ಲಿ ಯಾವುದೇ ದಿಢೀರ್ ಕುಸಿತವು ರೂಪಾಯಿ ಮೇಲೆ ಪರಿಣಾಮ ಬೀರಲಿದೆ. ಇದು ವದಂತಿಗಳಿಗೆ ಆಸ್ಪದ ನೀಡಿದೆ ಎಂದಿದ್ದಾರೆ.

ರಿಸರ್ವ್ ಬ್ಯಾಂಕ್ ಮಧ್ಯ ಪ್ರವೇಶದ ಬಳಿಕ ರೂಪಾಯಿ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಬಗ್ಗೆ ಸ್ಪಷ್ಟತೆ ಸಿಗುವವರೆಗೂ ರೂಪಾಯಿ ಮೌಲ್ಯ 91,92ರಲ್ಲಿ ವಹಿವಾಟು ನಡೆಸುವ ಸಾಧ್ಯತೆ ಇದೆ ಎಂದು ಇನ್‌ವಾಸೆಟ್ ಸಂಸ್ಥೆಯ ಬ್ಯುಸಿನೆಸ್ ಹೆಡ್ ಹರ್ಷಲ್ ದಾಸನಿ ತಿಳಿಸಿದ್ದಾರೆ.

ಷೇರುಪೇಟೆ ಕುಸಿತ

ಶುಕ್ರವಾರದ ವಹಿವಾಟಿನಲ್ಲಿ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ ಮತ್ತು ನಿಫ್ಟಿ ತೀವ್ರ ಕುಸಿತ ಕಂಡಿವೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 769.67 ಅಂಶ ಕುಸಿದು 81,537.70ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ದಿನದ ವಹಿವಟಿನ ಸಮಯದಲ್ಲಿ ಸನ್ಸೆಕ್ಸ್ 835.55 ಅಂಶಗಳಷ್ಟು ಕುಸಿದಿತ್ತು. ನಿಫ್ಟಿ 241.25 ಅಂಶಗಳಷ್ಟು ಕುಸಿದು 25,048.65ರಲ್ಲಿ ವಹಿವಾಟು ಮುಗಿಸಿದೆ.

ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಅದಾನಿ ಪೋರ್ಟ್ಸ್, ಎಟರ್ನಲ್, ಇಂಡಿಗೊ, ಆಕ್ಸಿಸ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಪವರ್ ಗ್ರಿಡ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಮಾರುತಿ ಸುಜುಕಿ ಇಂಡಿಯಾ, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ, ಟ್ರೆಂಟ್, ಎಲ್ ಅಂಡ್ ಟಿ, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಕುಸಿದಿವೆ.

ಮತ್ತೊಂದೆಡೆ, ಟೆಕ್ ಮಹೀಂದ್ರ, ಹಿಂದೂಸ್ಥಾನ್ ಯೂನಿಲಿವರ್, ಇನ್ಫೊಸಿಸ್, ಏಷಿಯನ್ ಪೇಂಟ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟೈಟನ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಲಾಭ ಗಳಿಸಿವೆ.

ಗುರುವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹2,549.80 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹4,222.98 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.