ADVERTISEMENT

ಸತತ ಒಂಬತ್ತನೇ ದಿನವೂ ಸಂವೇದಿ ಸೂಚ್ಯಂಕ ಇಳಿಕೆ

ಪಿಟಿಐ
Published 13 ಮೇ 2019, 16:39 IST
Last Updated 13 ಮೇ 2019, 16:39 IST
   

ಮುಂಬೈ: ಜಾಗತಿಕ ವಾಣಿಜ್ಯ ಸಮರ ಮತ್ತು ಚುನಾವಣಾ ಫಲಿತಾಂಶ ಕುರಿತ ಅನಿಶ್ಚಿತತೆಯಿಂದಾಗಿಷೇರುಪೇಟೆಗಳಲ್ಲಿ ಸತತ 9ನೇ ದಿನವೂ ವಹಿವಾಟು ಇಳಿಕೆ ಕಂಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 372 ಅಂಶ ಇಳಿಕೆ ಕಂಡು 37,090 ಅಂಶಗಳಿಗೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಪ್ಟಿ 130 ಇಳಿಕೆಯಾಗಿ 11,148 ಅಂಶಗಳಿಗೆ ತಲುಪಿತು.

ಏಷ್ಯಾದ ಷೇರುಪೇಟೆಗಳಲ್ಲಿ ನಡೆದ ಇಳಿಮುಖ ವಹಿವಾಟಿನಿಂದಾಗಿ ಭಾರತದ ಷೇರುಪೇಟೆಗಳಲ್ಲಿಯೂ ಸೂಚ್ಯಂಕಗಳು ಇಳಿಕೆ ಕಂಡವು.

ADVERTISEMENT

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಗಮನ ನೀಡಿರುವುದು ಸಹ ನಕಾರಾತ್ಮಕ ವಹಿವಾಟಿಗೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.

‘ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನಗದು ಬಿಕ್ಕಟ್ಟು ಮತ್ತು ದೊಡ್ಡ ಕಂಪನಿಗಳು ಭಾರಿ ಪ್ರಮಾಣದಲ್ಲಿ ಸಾಲ ಬಾಕಿ ಉಳಿಸಿಕೊಂಡಿರುವುದು ಷೇರುಪೇಟೆಯ ಮಂದಗತಿಯ ಚಲನೆಗೆ ಕಾರಣವಾಗಿದೆ’ ಎಂದು ಕಾರ್ಪೊರೇಟ್‌ ವ್ಯವಹಾರಗಳ ಕಾರ್ಯದರ್ಶಿ ಇಂಜೆತಿ ಶ್ರೀನಿವಾಸ್‌ ಅಭಿಪ್ರಾಯಪಟ್ಟಿದ್ದಾರೆ.

ರೂಪಾಯಿ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 59 ಪೈಸೆ ಇಳಿಕೆಯಾಗಿ ಎರಡೂವರೆ ತಿಂಗಳ ಕನಿಷ್ಠ ಮಟ್ಟವಾದ ಒಂದು ಡಾಲರ್‌ಗೆ ₹70.51ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.