ADVERTISEMENT

ಐ.ಟಿ. ವಲಯದಲ್ಲಿ ಖರೀದಿ, ಜಿಗಿದ ಸೆನ್ಸೆಕ್ಸ್

ಪಿಟಿಐ
Published 22 ಮೇ 2023, 16:18 IST
Last Updated 22 ಮೇ 2023, 16:18 IST
ಷೇರುಪೇಟೆ (ಸಾಂದರ್ಭಿಕ ಚಿತ್ರ)
ಷೇರುಪೇಟೆ (ಸಾಂದರ್ಭಿಕ ಚಿತ್ರ)   

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಐ.ಟಿ. ವಲಯದ ಷೇರುಗಳನ್ನು ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ ಪರಿಣಾಮವಾಗಿ ದೇಶದ ಷೇರುಪೇಟೆ ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿದವು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 234 ಅಂಶ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 111 ಅಂಶ ಏರಿಕೆ ಕಂಡಿದೆ.

ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಿದ ಅಥವಾ ತಗ್ಗಿಸಿದ ಆರೋಪಕ್ಕೆ ಸಾಕ್ಷ್ಯ ಲಭಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ನೇಮಿಸಿದ್ದ ತಜ್ಞರ ಸಮಿತಿಯು ವರದಿ ನೀಡಿರುವ ಪರಿಣಾಮವಾಗಿ, ಸಮೂಹದ ಕಂಪನಿಗಳ ಷೇರುಮೌಲ್ಯವು ಏರಿಕೆ ದಾಖಲಿಸಿದೆ.

ADVERTISEMENT

ಅದಾನಿ ಎಂಟರ್‌ಪ್ರೈಸಸ್‌ ಷೇರು ಮೌಲ್ಯವು ಸೋಮವಾರ ಶೇ 18.84ರಷ್ಟು ಏರಿಕೆ ಕಂಡಿದೆ. ಅದಾನಿ ವಿಲ್ಮರ್ ಷೇರುಮೌಲ್ಯ ಶೇ 10ರಷ್ಟು ಏರಿಕೆ ದಾಖಲಿಸಿದೆ. ಐ.ಟಿ. ಸೂಚ್ಯಂಕವು ಶೇ 2.15ರಷ್ಟು ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.