ADVERTISEMENT

ಷೇರುಪೇಟೆ ವಹಿವಾಟು ಚೇತರಿಕೆ

ಪಿಟಿಐ
Published 13 ನವೆಂಬರ್ 2018, 15:22 IST
Last Updated 13 ನವೆಂಬರ್ 2018, 15:22 IST

ಮುಂಬೈ: ರೂಪಾಯಿ ಮೌಲ್ಯ ವೃದ್ಧಿ ಮತ್ತು ಕಚ್ಚಾ ತೈಲ ದರ ಇಳಿಕೆಯಿಂದಾಗಿ ದೇಶದ ಷೇರುಪೇಟೆಗಳು ಮಂಗಳವಾರ ಚೇತರಿಕೆ ಹಾದಿಗೆ ಮರಳಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 332 ಅಂಶ ಏರಿಕೆ ಕಂಡು 35,144 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಸೋಮವಾರ 425 ಅಂಶ ಇಳಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 100 ಅಂಶ ಹೆಚ್ಚಾಗಿ 10,582 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ವಿದೇಶಿ ಹೂಡಿಕೆದಾರರು ಷೇರುಗಳ ಖರೀದಿ ಆರಂಭಿಸಿದ್ದಾರೆ. ಸೋಮವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು
₹ 832 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಇದರ ಜತೆಗೆ ಮಂಗಳವಾರ ಬ್ರೆಂಟ್ ಕಚ್ಚಾ ತೈಲ ದರ ಶೇ 0.98 ರಷ್ಟು ಇಳಿಕೆಯಾಗಿ ಒಂದು ಬ್ಯಾರೆಲ್‌ಗೆ 69.43 ಬ್ಯಾರೆಲ್‌ಗೆ ಇಳಿಕೆಯಾಗಿದೆ. ವೆಸ್ಟ್‌ ಟೆಕ್ಸಸ್ ಇಂಟರ್‌ಮಿಡಿಯೇಟ್ ದರ್ಜೆಯ ಕಚ್ಚಾ ತೈಲ ದರ 74 ಸೆಂಟ್‌ಗಳಷ್ಟು ಇಳಿಕೆಯಾಗಿ ಒಂದು ಬ್ಯಾರೆಲ್‌ಗೆ 59.19 ಡಾಲರ್‌ಗೆ ಇಳಿಕೆಯಾಗಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ,ಡಾಲರ್‌ ಎದುರು ರೂಪಾಯಿ ಮೌಲ್ಯ22 ಪೈಸೆ ಚೇತರಿಕೆ ಕಂಡು ಒಂದು ಡಾಲರ್‌ಗೆ ₹ 72.67ರಂತೆ ವಿನಿಮಯಗೊಂಡಿದೆ. ಈ ಸಕಾರಾತ್ಮಕ ಅಂಶಗಳು ಷೇರುಪೇಟೆಯಲ್ಲಿ ಸೂಚ್ಯಂಕಗಳನ್ನು ಏರಿಕೆ ಕಾಣುವಂತೆ ಮಾಡಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.