ADVERTISEMENT

ಮಾರಾಟದ ಒತ್ತಡಕ್ಕೆ ಮಣಿದ ಗೂಳಿ

ಪಿಟಿಐ
Published 30 ಅಕ್ಟೋಬರ್ 2018, 18:42 IST
Last Updated 30 ಅಕ್ಟೋಬರ್ 2018, 18:42 IST
   

ನವದೆಹಲಿ: ದೇಶದ ಷೇರುಪೇಟೆಗಳಲ್ಲಿ ಮಂಗಳವಾರಹಣಕಾಸು ಮತ್ತು ಇಂಧನ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದ ನಕಾರಾತ್ಮಕ ಮಟ್ಟದಲ್ಲಿ ವಹಿವಾಟು ಅಂತ್ಯವಾಯಿತು.

ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರವೂ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಮಂಗಳವಾರ 176 ಅಂಶ ಇಳಿಕೆ ಕಂಡು, 33,891 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಸೋಮವಾರದ ವಹಿವಾಟಿನಲ್ಲಿ 718 ಅಂಶಗಳಷ್ಟು ಜಿಗಿತ ಕಂಡಿತ್ತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 52 ಅಂಶ ಇಳಿಕೆಯಾಗಿ 10,198 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.ಸೋಮವಾರದ ವಹಿವಾಟಿನಲ್ಲಿ 220 ಅಂಶಗಳಷ್ಟು ಏರಿಕೆಯಾಗಿತ್ತು.

ಬ್ರೆಂಟ್‌ ಕಚ್ಚಾ ತೈಲ ದರ 11 ಸೆಂಟ್‌ಗಳಷ್ಟು ಕಡಿಮೆಯಾಗಿ ಒಂದು ಬ್ಯಾರೆಲ್‌ಗೆ 76.75 ಡಾಲರ್‌ನಂತೆ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.