ಮುಂಬೈ: ಕೊರೊನಾ ಸೃಷ್ಟಿಸಿರುವ ಭೀತಿಯಿಂದಾಗಿ ದೇಶದ ಷೇರುಪೇಟೆಯಲ್ಲಿ ಮೂರು ದಿನಗಳಿಂದ ಭಾರಿ ಕುಸಿತ ಕಂಡು ಬರುತ್ತಿದೆ. ಸೋಮವಾರದಿಂದ ಬುಧವಾರದವರೆಗೆ ನಡೆದಿರುವ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 15.72 ಲಕ್ಷ ಕೋಟಿಗಳಷ್ಟು ಕರಗಿದ್ದು, ಷೇರುಪೇಟೆಯ ಬಂಡವಾಳ ಮೌಲ್ಯ ₹ 113.53 ಲಕ್ಷ ಕೋಟಿಗೆ ತಲುಪಿದೆ.
ಬುಧವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 1,710 ಅಂಶಗಳಷ್ಟು ಕುಸಿತ ಕಂಡು 28,869 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. 2017ರ ಜನವರಿ ಬಳಿಕ ದಾಖಲಾಗಿರುವ ಕನಿಷ್ಠ ಮಟ್ಟ ಇದಾಗಿದೆ. ಮೂರು ದಿನಗಳಲ್ಲಿ ಒಟ್ಟಾರೆ5,234 ಅಂಶ ಕುಸಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.