ADVERTISEMENT

ಐಪಿಒ ಹೂಡಿಕೆ: ಅರಿತರೆ ಲಾಭ, ಆತುರಪಟ್ಟರೆ ನಷ್ಟ

ಶರತ್ ಎಂ.ಎಸ್.
Published 15 ನವೆಂಬರ್ 2021, 16:52 IST
Last Updated 15 ನವೆಂಬರ್ 2021, 16:52 IST
ಶರತ್ ಎಂ.ಎಸ್.
ಶರತ್ ಎಂ.ಎಸ್.   

2021ರಲ್ಲಿ ಸಾಲು ಸಾಲು ಐಪಿಒಗಳು ನಡೆದಿವೆ. 2022ರಲ್ಲಿಯೂ ಹಲವು ಕಂಪನಿಗಳುಐಪಿಒನಡೆಸಲು ಸಜ್ಜಾಗಿವೆ. ಅರಿತು ಒಳ್ಳೆಯ ಕಂಪನಿಗಳ ಐಪಿಒದಲ್ಲಿ ಹೂಡಿಕೆ ಮಾಡುವವರಿಗೆ ಉತ್ತಮಲಾಭಸಿಗುವ ಸಾಧ್ಯತೆ ಹೆಚ್ಚು. ಆದರೆ ಕಂಪನಿಗಳ ಪೂರ್ವಾಪರ ಅರಿಯದೆ ಒಂದಿಷ್ಟು ಲಾಭವಾಗಬಹುದು ಎಂಬ ಅಂದಾಜಿನೊಂದಿಗೆ ಸಿಕ್ಕ ಸಿಕ್ಕ ಕಂಪನಿಗಳ ಐಪಿಒಗಳಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಸಂಪತ್ತು ಕರಗುತ್ತದೆ.

ಅವಸರವೇ ಅಪಾಯ: 2017ರಮಾರ್ಚ್ 8ರಂದು ಅವೆನ್ಯೂ ಸೂಪರ್ ಮಾರ್ಕೆಟ್ಸ್ ಅರ್ಥಾತ್ ಡಿ–ಮಾರ್ಟ್ ಕಂಪನಿಯಐಪಿಒ(ಆರಂಭಿಕ ಸಾರ್ವಜನಿಕಹೂಡಿಕೆ) ಆರಂಭವಾದಾಗ ಪ್ರತಿ ಷೇರಿನ ಬೆಲೆ ₹ 299 ಇತ್ತು. ಈಗ ಅದೇ ಷೇರಿನ ಬೆಲೆ ₹ 5,078! 2021ರ ಜನವರಿಯಲ್ಲಿ ಇಂಡಿಗೊ ಪೇಂಟ್ಸ್ಐಪಿಒನಡೆದಾಗ ಪ್ರತಿ ಷೇರಿನ ಬೆಲೆ ₹ 1,490 ಇತ್ತು. ಈಗ ಅದೇ ಷೇರಿನ ಬೆಲೆ ₹ 2,298 ಆಗಿದೆ. 2021ರಮಾರ್ಚ್‌ನಲ್ಲಿ ಷೇರು ಮಾರುಕಟ್ಟೆಗೆ ಸೇರ್ಪಡೆಯಾದ ಎಂಟಾರ್ ಟೆಕ್ನಾಲಜೀಸ್ಐಪಿಒಷೇರಿನ ಬೆಲೆ ₹ 575. ಈಗ ಅದೇ ಷೇರಿನ ಬೆಲೆ ₹ 1,901ಕ್ಕೆ ಜಿಗಿದಿದೆ. ಹೌದು, ಉತ್ತಮ ಕಂಪನಿಗಳ ಐಪಿಒಗಳಲ್ಲಿ ಹೂಡಿಕೆ ಮಾಡಿದಾಗ ಈ ರೀತಿ ದುಡ್ಡನ್ನು ಬಿತ್ತಿ ದುಡ್ಡು ಬೆಳೆಸಲು ಸಾಧ್ಯವಾಗುತ್ತದೆ.

ಅಂದಮಾತ್ರಕ್ಕೆ, ಎಲ್ಲ ಕಂಪನಿಗಳ ಐಪಿಒಗಳುಲಾಭತಂದುಕೊಡುವುದಿಲ್ಲ. ಹೂಡಿಕೆ ಮಾಡಿದವರ ದುಡ್ಡನ್ನು ಕರಗಿಸಿರುವ ಕಂಪನಿಗಳು ಕೂಡ ಸಾಕಷ್ಟಿವೆ! 2017ರನವೆಂಬರ್‌ನಲ್ಲಿಐಪಿಒನಡೆಸಿದ ಒಂದು ಕಂಪನಿಯು,ಪ್ರತಿ ಷೇರಿಗೆ ₹ 400 ನಿಗದಿ ಮಾಡಿತ್ತು. ಈಗ ಅದೇ ಕಂಪನಿಯ ಷೇರಿನ ಬೆಲೆ 159ಕ್ಕೆ
ಇಳಿದಿದೆ.

ADVERTISEMENT

ಐಪಿಒಅಂದರೆ?: ಇನಿಷಿಯಲ್ ಪಬ್ಲಿಕ್ ಆಫರಿಂಗ್‘ಐಪಿಒ’ದ ವಿಸ್ತೃತ ರೂಪ. ಕನ್ನಡದಲ್ಲಿ ಇದನ್ನು ಆರಂಭಿಕ ಸಾರ್ವಜನಿಕ ಹೂಡಿಕೆ ಎನ್ನಬಹುದು. ಖಾಸಗಿ ಕಂಪನಿಯೊಂದು ಮೊದಲ ಬಾರಿಗೆ ತನ್ನಷೇರುಗಳನ್ನು ಸಾರ್ವಜನಿಕರಿಗೆ ನೀಡಿ ಬಂಡವಾಳ ಸಂಗ್ರಹ ಮಾಡುವ ಪ್ರಕ್ರಿಯೆ ‘ಐಪಿಒ’. ಸರಳವಾಗಿ ಹೇಳುವುದಾದರೆ ಕಂಪನಿಯೊಂದು ತನ್ನ ಮಾಲೀಕತ್ವದ ಒಂದಷ್ಟು ಪಾಲನ್ನು ನಮ್ಮನಿಮ್ಮಂತಹ ಜನಸಾಮಾನ್ಯರಿಗೆ ನೀಡುವ ಪ್ರಕ್ರಿಯೆಯೇ ಆರಂಭಿಕ ಸಾರ್ವಜನಿಕ ಹೂಡಿಕೆ.‘ಐಪಿಒ’ಪ್ರಕ್ರಿಯೆ ಬಳಿಕ ಆ ನಿರ್ದಿಷ್ಟ ಕಂಪನಿಯಷೇರುಮಾರುಕಟ್ಟೆಯಲ್ಲಿ ಸ್ಥಾನ (ಲಿಸ್ಪಿಂಗ್) ಪಡೆದುಕೊಳ್ಳುತ್ತದೆ.

ನಮಗೇನುಲಾಭ?: ಕಂಪನಿಯ ಪ್ರವರ್ತಕರು ಹೆಚ್ಚು ಬಂಡವಾಳ ಸಂಗ್ರಹಿಸಲು, ಉದ್ಯಮ ವಿಸ್ತರಿಸಲು, ದೈನಂದಿನ ನಿರ್ವಹಣಾ ವೆಚ್ಚ ನಿಭಾಯಿಸಲು, ಹಿಂದೆ ಮಾಡಿದ ಸಾಲದ ಮರುಪಾವತಿಗೆ ಸೇರಿದಂತೆ ಹಲವು ಪ್ರಮುಖ ಕಾರಣಗಳಿಗೆ ಐಪಿಒಗೆ ಮುಂದಾಗುತ್ತಾರೆ. ಸಾರ್ವಜನಿಕರಿಂದ, ಬ್ಯಾಂಕ್‌ಗಳಿಂದ ಹಣ ಸಂಗ್ರಹಿಸುತ್ತಾರೆ. ನೀವು ನಿಮ್ಮ ಹಣ ತೊಡಗಿಸಿ‘ಐಪಿಒ’ ಮೂಲಕ ಷೇರು ಖರೀದಿಸುವ ಕಂಪನಿಯು ಭವಿಷ್ಯದಲ್ಲಿ ಉತ್ತಮ ಬೆಳವಣಿಗೆ ಸಾಧಿಸಿದರೆ ಆ ಕಂಪನಿಯ ಏಳ್ಗೆಗೆ ಅನುಗುಣವಾಗಿ ನೀವು ಹಣ ಗಳಿಸುತ್ತೀರಿ. ಕಂಪನಿನಷ್ಟಅನುಭವಿಸಿದರೆ ಅದರ ಹೊರೆಯೂ ನಿಮ್ಮ ಮೇಲಿರುತ್ತದೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.