ADVERTISEMENT

ಷೇರುಪೇಟೆ ಚೇತರಿಕೆ

ಪಿಟಿಐ
Published 15 ಅಕ್ಟೋಬರ್ 2018, 17:01 IST
Last Updated 15 ಅಕ್ಟೋಬರ್ 2018, 17:01 IST
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ   

ಮುಂಬೈ : ದೇಶದ ಷೇರುಪೇಟೆಗಳು ಸತತ ಎರಡನೇ ವಹಿವಾಟು ಅವಧಿಯಲ್ಲಿಯೂ ಏರಿಕೆ ದಾಖಲಿಸಿವೆ.

ಸೆಪ್ಟೆಂಬರ್‌ ತಿಂಗಳ ಚಿಲ್ಲರೆ ಮತ್ತು ಸಗಟು ಹಣದುಬ್ಬರಗಳು ಏರಿಕೆ ಕಂಡಿವೆ. ವಿದೇಶಿ ಬಂಡವಾಳ ಹೊರಹರಿವು ಮುಂದುವರಿದಿದೆ. ಈ ಎಲ್ಲಾ ಬೆಳವಣಿಗೆಗಳ ಹೊರತಾಗಿಯೂ, ದೇಶಿ ಸಾಂಸ್ಥಿಕ ಹೂಡಿಕೆದಾರರ ಸಕ್ರಿಯ ಭಾಗವಹಿಸುವಿಕೆಯುಸಕಾರಾತ್ಮಕ ಚಟುವಟಿಕೆ ನಡೆಯುವಂತೆ ಮಾಡಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 132 ಅಂಶ ಏರಿಕೆ ಕಂಡು 34,865 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 40 ಅಂಶ ಹೆಚ್ಚಾಗಿ 10,512 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ADVERTISEMENT

ಕಚ್ಚಾ ತೈಲ ದರಶೇ 0.98ರಷ್ಟು ಹೆಚ್ಚಾಗಿ, ಒಂದು ಬ್ಯಾರೆಲ್‌ಗೆ 81.79 ಡಾಲರ್‌ನಂತೆ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.