ಮುಂಬೈ: ಗುರುವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡವು. ಅಮೆರಿಕದ ಹಣಕಾಸು ಮತ್ತು ಸಾಲದ ಕಳವಳಗಳ ನಡುವೆ ಜಾಗತಿಕ ಷೇರುಗಳಲ್ಲಿನ ದುರ್ಬಲ ಪ್ರವೃತ್ತಿಯ ಹಿನ್ನೆಲೆ ಕುಸಿತ ಕಂಡಿವೆ.
ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 578.3 ಅಂಶಗಳಷ್ಟು ಕುಸಿತ ಕಂಡು 81,018.33ಕ್ಕೆ ತಲುಪಿತ್ತು. ಎನ್‌ಎಸ್‌ಇ ನಿಫ್ಟಿ 203.45 ಅಂಶಗಳಷ್ಟು ಕುಸಿತ ಕಂಡು 24,610ಕ್ಕೆ ತಲುಪಿತ್ತು.
ನಂತರ, ಸೆನ್ಸೆಕ್ಸ್ 746.48 ಅಂಶಗಖ ಕುಸಿತ ಕಂಡು 80,832.82ಕ್ಕೆ ತಲುಪಿು್ತು. ನಿಫ್ಟಿ 233.80 ಅಂಶಗಳ ಕುಸಿತ್ನಂಡುಕ 24,575.65 ಕ್ಕ ತಲುಪಿತ್ತು.ಸೆನ್ಸೆಕ್ಸ್ ಸಂಸ್ಥೆಗಳಾದ ಪವರ್ ಗ್ರಿಡ್, ಟೆಕ್ ಮಹೀಂದ್ರ, ಎಚ್‌ಸಿಎಲ್ ಟೆಕ್, ನೆಸ್ಲೆ, ಹಿಂದೂಸ್ತಾನ್ ಯೂನಿಲಿವರ್, ಐಟಿಸಿ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಅತಿ ಹೆಚ್ಚು ನಷ್ಟ ಕಂಡಿವೆ.
ಅದಾನಿ ಪೋರಟ್ಸ್ ಮತ್ತು ಇಂಡಸ್‌ಲ್ಯಾಂಡ್ ಬ್ಯಾಂಕ್ ಲಾಭ ಗಳಿಸಿವೆ.
ಏಷ್ಯಾ ಷರುಪೇಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ, ಜಪಾನ್‌ನ ನಿಕ್ಕಿ 225 ಸೂಚ್ಯಂಕ ಮತ್ತು ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಇಳಿಕೆ ಕಂಡಿದ್ದವು. ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕ ಏರಿಕೆ ಕಂಡಿತ್ತು.
ಬುಧವಾರ ಅಮೆರಿಕ ಷೇರುಪೇಟೆಯು ಕುಸಿತದೊಂದಿಗೆ ಕೊನೆಗೊಂಡಿತ್ತು.
ಬುಧವಾರ ಷೇರುಪೇಟೆ ಚೇತರಿಕೆ ಬಳಿಕ ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್‌ಐಐ) ₹2,201 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.