ADVERTISEMENT

ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಆಶಯ: ಷೇರುಪೇಟೆ ಏರಿಕೆ

ಪಿಟಿಐ
Published 3 ಜುಲೈ 2025, 5:14 IST
Last Updated 3 ಜುಲೈ 2025, 5:14 IST
<div class="paragraphs"><p>ದಿಢೀರ್‌ ಏರಿಕೆ  ಕಂಡ ಷೇರುಪೇಟೆ  ವಹಿವಾಟು</p></div>

ದಿಢೀರ್‌ ಏರಿಕೆ ಕಂಡ ಷೇರುಪೇಟೆ ವಹಿವಾಟು

   

ಮುಂಬೈ: ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಆಶಾವಾದದ ನಡುವೆ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡವು.

ಅಮೆರಿಕ-ವಿಯೆಟ್ನಾಂ ವ್ಯಾಪಾರ ಒಪ್ಪಂದವು ದೇಶೀಯ ಷೇರುಗಳ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ADVERTISEMENT

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 242.83 ಅಂಶಗಳಷ್ಟು ಏರಿಕೆಯಾಗಿ 83,652.52ಕ್ಕೆ ತಲುಪಿತ್ತು. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 83.65 ಅಂಶಗಳಷ್ಟು ಏರಿಕೆಯಾಗಿ 25,537ಕ್ಕೆ ತಲುಪಿತ್ತು.

ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ವಿಯೆಟ್ನಾಂನಿಂದ ಆಮದು ವಸ್ತುಗಳ ಮೇಲಿನ ಸುಂಕವನ್ನು ಶೇ 46ರಿಂದ ಶೇ 20ಕ್ಕೆ ಇಳಿಸಿ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದಾರೆ. ಅದರಂತೆ ಭಾರತದ ಮೇಲಿನ ಸುಂಕವನ್ನು ಶೇ 15–18ಕ್ಕೆ ಇಳಿಸಬಹುದು ಎಂಬ ಭರವಸೆಯನ್ನು ಹುಟ್ಟುಹಾಕಿತು.

ಈ ಆಶಾವಾದವು ನಿಫ್ಟಿಯನ್ನುಸಾರ್ವಕಾಲಿಕ ಗರಿಷ್ಠ ಮಟ್ಟವಾದ 26,277ಕ್ಕೆ ತಲುಪಿಸುವ ನಿರೀಕ್ಷೆ ಇದೆ.

ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಏಷ್ಯನ್ ಪೇಂಟ್ಸ್, ಟಾಟಾ ಸ್ಟೀಲ್, ಇನ್ಫೋಸಿಸ್, ಮಹೀಂದ್ರ ಅಂಡ್ ಮಹೀಂದ್ರ, ಎಟರ್ನಲ್ ಮತ್ತು ಟಾಟಾ ಮೋಟರ್ಸ್ ಲಾಭ ಗಳಿಸಿವೆ.

ಏಷ್ಯಾ ಷೇರುಪೇಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ, ಜಪಾನ್‌ನ ನಿಕ್ಕಿ 225 ಸೂಚ್ಯಂಕ ಮತ್ತು ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕವು ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಕುಸಿತ ಕಂಡಿದೆ.

ಬುಧವಾರ ಅಮೆರಿಕದ ಮಾರುಕಟ್ಟೆ ಏರಿಕೆಯೊಂದಿಗೆ ಕೊನೆಗೊಂಡಿತ್ತು.

ವಿನಿಮಯ ದತ್ತಾಂಶದ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ ₹1,561.62 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಇದೇವೇಳೆ, ಜಾಗತಿಕ ಅಪಾಯದ ಚಿಂತನೆ ಮತ್ತು ನಿರಂತರ ವಿದೇಶಿ ನಿಧಿಯ ಹೊರಹರಿವಿನ ಮಧ್ಯೆ, ಗುರುವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು ರೂಪಾಯಿ 8 ಪೈಸೆ ಕುಸಿದು ₹85.70 ಕ್ಕೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.