ADVERTISEMENT

ಮಾರಾಟದ ಒತ್ತಡ: ಸೆನ್ಸೆಕ್ಸ್ ಇಳಿಕೆ

ಪಿಟಿಐ
Published 5 ಜನವರಿ 2023, 14:20 IST
Last Updated 5 ಜನವರಿ 2023, 14:20 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಮಾರಾಟದ ಒತ್ತಡಕ್ಕೆ ಒಳಗಾಗಿ ದೇಶದ ಷೇರುಪೇಟೆಗಳು ಸತತ ಎರಡನೇ ದಿನವೂ ಇಳಿಕೆ ಕಂಡವು. ಈ ವರ್ಷದಲ್ಲಿ ಬಡ್ಡಿದರವನ್ನು ಇನ್ನಷ್ಟು ಹೆಚ್ಚಳ ಮಾಡುವ ಸೂಚನೆಯು ಅಮೆರಿಕದ ಫೆಡರಲ್‌ ರಿಸರ್ವ್‌ ಸಭೆಯ ಸಾರಾಂಶದಲ್ಲಿ ಇರುವುದು ಇಳಿಕೆಗೆ ಕಾರಣವಾಯಿತು.

ವಿದೇಶಿ ಬಂಡವಾಳ ಹೊರಹರಿವು ಮುಂದುವರಿದಿರುವುದು ಸಹ ಮಾರಾಟದ ಒತ್ತಡಕ್ಕೆ ಕಾರಣವಾಯಿತು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 304 ಅಂಶ ಇಳಿಕೆ ಕಂಡು 60,353 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 51 ಅಂಶ ಇಳಿಕೆಯಾಗಿ 17,992 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ADVERTISEMENT

ಏಷ್ಯಾದಲ್ಲಿ ಸೋಲ್‌, ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್‌ ಷೇರುಪೇಟೆಗಳು ಸಕಾರಾತ್ಮಕವಾಗಿ ವಹಿವಾಟು ಅಂತ್ಯಗೊಳಿಸಿದವು. ಯುರೋಪ್‌ನಲ್ಲಿ ಕೆಲವು ಷೇರುಪೇಟೆಗಳು ಗಳಿಕೆ ಕಂಡರೆ, ಇನ್ನು ಕೆಲವು ಷೇರುಪೇಟೆಗಳ ವಹಿವಾಟು ಇಳಿಕೆ ಕಂಡಿತು. ಬ್ರೆಂಟ್‌ ಕಚ್ಚಾ ತೈಲ ದರ ಶೇ 2.04ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 79.43 ಡಾಲರ್‌ಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.