ADVERTISEMENT

ಸೋಮವಾರದಿಂದ ಸುಲಾ ಐಪಿಒ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 11:09 IST
Last Updated 7 ಡಿಸೆಂಬರ್ 2022, 11:09 IST

ಬೆಂಗಳೂರು: ವೈನ್ ತಯಾರಿಕಾ ಕಂಪನಿ ‘ಸುಲಾ ವಿನ್ಯಾರ್ಡ್ಸ್‌ ಲಿಮಿಟೆಡ್’ ಆರಂಬಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಬಂಡವಾಳ ಸಂಗ್ರಹಿಸಲು ಮುಂದಾಗಿದೆ. ಪ್ರತಿ ಷೇರಿಗೆ ₹ 340–₹ 357 ಬೆಲೆ ನಿಗದಿ ಮಾಡಿದೆ.

ಸೋಮವಾರದಿಂದ ಬುಧವಾರದವರೆಗೆ ಬಿಡ್ ಸಲ್ಲಿಸಲು ಅವಕಾಶ ಇರಲಿದೆ. ಹೂಡಿಕೆದಾರರು ಕನಿಷ್ಠ 42 ಷೇರುಗಳಿಗೆ ಬಿಡ್ ಸಲ್ಲಿಸಬೇಕು. ಕಂಪನಿಯು 2011ರಿಂದ 2022ರ ನಡುವೆ ಶೇಕಡ 13.3ರ ವಾರ್ಷಿಕ ಸಂಯುಕ್ತ ಬೆಳವಣಿಗೆ ದರವನ್ನು ಕಾಯ್ದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT