
ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಶನಿವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ಧಾರಣೆಯು ಒಂದೇ ದಿನ ಕೆ.ಜಿಗೆ ₹72,500 (ಶೇ 18.85ರಷ್ಟು) ಇಳಿಕೆ ಆಗಿದೆ.
1 ಕೆ.ಜಿ ಬೆಳ್ಳಿ ದರವು ₹3.12 ಲಕ್ಷದಂತೆ ಮಾರಾಟವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
2025ರ ಡಿಸೆಂಬರ್ 31ರಂದು ಕೆ.ಜಿ ಬೆಳ್ಳಿ ದರವು ₹2.39 ಲಕ್ಷವಿತ್ತು. ಅದು ಈಗ ₹3.12 ಲಕ್ಷಕ್ಕೆ ತಲುಪಿದ್ದು, ಒಂದೇ ತಿಂಗಳಿನಲ್ಲಿ ₹73 ಸಾವಿರ (ಶೇ 30ರಷ್ಟು) ಹೆಚ್ಚಳವಾಗಿದೆ.
10 ಗ್ರಾಂ ಚಿನ್ನದ (ಶೇ 99.9ರಷ್ಟು ಪರಿಶುದ್ಧತೆ) ದರವು ಶನಿವಾರದಂದು ₹3,500 ಕಡಿಮೆಯಾಗಿ, ₹1,65,500ಕ್ಕೆ ಇಳಿದಿದೆ.
ಕಳೆದ ಡಿಸೆಂಬರ್ 31ರಂದು ಚಿನ್ನದ ದರವು ₹1,37,700 ಇತ್ತು. ಒಂದು ತಿಂಗಳಿನಲ್ಲಿ ಬೆಲೆಯು ₹27,800 ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಲಾಭದ ಗಳಿಕೆಗಾಗಿ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿ ಮಾರಾಟಕ್ಕೆ ಮುಂದಾಗಿದ್ದಾರೆ. ಇದು ಅಮೂಲ್ಯ ಲೋಹಗಳ ದರದ ಇಳಿಕೆಗೆ ಕಾರಣ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.