ADVERTISEMENT

ಚಂದಕವಾಡಿ: ವಿಜೃಂಭಣೆಯ ಲಕ್ಷ್ಮೀದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 10:22 IST
Last Updated 22 ಫೆಬ್ರುವರಿ 2020, 10:22 IST
ಚಾಮರಾಜನಗರ ತಾಲ್ಲೂಕಿನ ಚಂದಕವಾಡಿ ಗ್ರಾಮದಲ್ಲಿ ಶುಕ್ರವಾರ ಲಕ್ಷ್ಮಿದೇವಿ ಅಮ್ಮನವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು
ಚಾಮರಾಜನಗರ ತಾಲ್ಲೂಕಿನ ಚಂದಕವಾಡಿ ಗ್ರಾಮದಲ್ಲಿ ಶುಕ್ರವಾರ ಲಕ್ಷ್ಮಿದೇವಿ ಅಮ್ಮನವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು   

ಚಾಮರಾಜನಗರ: ತಾಲ್ಲೂಕಿನಚಂದಕವಾಡಿಗ್ರಾಮದ ಲಕ್ಷ್ಮೀದೇವಿ ರಥೋತ್ಸವಸಾವಿರಾರುಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಬುಧವಾರ ಕೊಂಡೋತ್ಸವದ ಮೂಲಕಜಾತ್ರೆಆರಂಭವಾಗಿತ್ತು.ಜಾತ್ರೆಯ ಅಂಗವಾಗಿ ಗುರುವಾರ ಮಡೆ ಉತ್ಸವ ಹಾಗೂದನಗಳ ಪರಿಷೆ ನಡೆದಿತ್ತು. ಶುಕ್ರವಾರ ಸಂಜೆ ರಥೋತ್ಸವದ ಮೂಲಕ ಮೂರು ದಿನಗಳಜಾತ್ರೆ ಮುಕ್ತಾಯಗೊಂಡಿತು.

ಕೊನೆಯ ದಿನವಾದ ಶುಕ್ರವಾರ ಮುಂಜಾನೆಯಿಂದಲೇ,ಚಂದಕವಾಡಿಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದನೂರಾರು ಮಹಿಳಾಭಕ್ತರುದೇವಸ್ಥಾನದಆವರಣದಲ್ಲಿ ಬೆಲ್ಲದಅನ್ನ ತಯಾರಿಸಿ ದೇವಿಗೆ ಸಮರ್ಪಿಸಿ ಹರಕೆ ತೀರಿಸಿದರು.

ADVERTISEMENT

ರಥೋತ್ಸವ: ಸಂಜೆ 5.40ರಹೊತ್ತಿಗೆರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಬಣ್ಣದ ಬಟ್ಟೆಗಳಿಂದ ಅಲಂಕೃತಗೊಂಡ ತೇರಿನೊಳಗೆ ದೇವಿಯ ಮೂರ್ತಿಯನ್ನಿಟ್ಟು, ಭಕ್ತರು ತೇರನ್ನು 100 ಮೀಟರ್‌ ಸುತ್ತಾಡಿಸಿದ ಬಳಿಕದೇವಾಲಯ ಆವರಣದ ಸ್ವಸ್ಥಾನಕ್ಕೆ ತಲುಪಿಸಿದರು. ಇದಕ್ಕೂ ಮೊದಲು ಲಕ್ಷ್ಮೀದೇವಿಯ ಉತ್ಸವ ಮೂರ್ತಿಯನ್ನು ತೇರಿನಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.ಛತ್ರಿ, ಚಾಮರಗಳು ರಥೋತ್ಸವಕ್ಕೆ ಮತ್ತಷ್ಟು ಮೆರುಗು ತಂದವು.

ಹಣ್ಣು–ಧವನ ಎಸೆದ ನವಜೋಡಿಗಳು: ನವ ವಧು ವರರು ರಥಕ್ಕೆ ಹಣ್ಣು– ಧವನ ಎಸೆದು ಸಂತೃಪ್ತರಾದರು.ಹರಕೆ ಹೊತ್ತವರು ನಗ– ನಾಣ್ಯ ಎಸೆದರು. ಕೊಂಡಕ್ಕೆ ಉಪ್ಪು ಚೆಲ್ಲಿ ವಿಭೂತಿ ಹಾಕಿಕೊಂಡು ಹರಕೆ ತೀರಿಸಿದರು.

ಚಿಣ್ಣರ ಸಂಭ್ರಮ: ಗ್ರಾಮ ದೇವತೆಯ ಉತ್ಸವದಲ್ಲಿ ಜಾತ್ರಾ ಮೈದಾನದ ತುಂಬಾ ವ್ಯಾಪಾರ, ವಹಿವಾಟು ಜೋರಾಗಿತ್ತು. ಆಟೋಟಗಳು ಚಿಣ್ಣರನ್ನು ಕೈಬೀಸಿ ಕರೆಯುತ್ತಿತ್ತು. ಗ್ರಾಮದ ಜನರು, ಮಕ್ಕಳು ಜಾತ್ರೆಯ ಸವಿ ಸವಿದು ಸಂಭ್ರಮ ಪಟ್ಟರು.

ಲಕ್ಷ್ಮೀದೇವಿವು ಚಂದಕವಾಡಿ, ಕೋಡಿಮೋಳೆ, ಅಂಚಿತಾಳಪುರ ಈ ಮೂರು ಗ್ರಾಮಗಳ ಜನತೆಗೆ ಆರಾಧ್ಯ ದೇವತೆ. ಅಲ್ಲದೆ ಸುತ್ತಮುತ್ತಲ ಬಸಪ್ಪನಪಾಳ್ಯ, ಹೆಬ್ಬಸೂರು, ನಾಗವಳ್ಳಿ ಸೇರಿದಂತೆ 16ಕ್ಕೂ ಹೆಚ್ಚು ಗ್ರಾಮಗಳು ಒಗ್ಗೂಡುವ ಜಾತ್ರೆ ಇದಾಗಿದೆ.ಶಾಸಕ ಸಿ.ಪುಟ್ಟರಂಗಶೆಟ್ಟಿ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.