ADVERTISEMENT

ಮಾಸ ಭವಿಷ್ಯ: 2021ರ ಜುಲೈ 1 ರಿಂದ 31ರವರೆಗೆ

ಪ್ರಜಾವಾಣಿ ವಿಶೇಷ
Published 2 ಜುಲೈ 2021, 13:17 IST
Last Updated 2 ಜುಲೈ 2021, 13:17 IST
   

ಮೇಷ: ಉದ್ಯೋಗಿಗಳಿಗೆ ಕೆಲಸದಲ್ಲಿ ವಿರೋಧ.ಸ್ಥಳ ಬದಲಾವಣೆ ಸಾಧ್ಯತೆ. ಸಾರ್ವಜನಿಕ ಕ್ಷೇತ್ರದಲ್ಲಿನ ಜನರಿಗೆ ತೊಂದರೆ. ತಿಂಗಳ ಉತ್ತರಾರ್ಧದಲ್ಲಿ ಜೀವನದಲ್ಲಿ ಸ್ಥಿರತೆ. ದೊಡ್ಡ ಆರ್ಥಿಕ ವ್ಯವಹಾರ ವಹಿವಾಟುಗಳು ಪೂರ್ಣಗೊಳ್ಳುವವು. ತಿಂಗಳ ಕೊನೆಯಲ್ಲಿ ಮನೆಗೆ ಅಪರೂಪದ ಬಂದುಗಳ ಆಗಮನ. ಮನೆಯಲ್ಲಿ ಸಂತಸದ ವಾತಾವರಣ.

ಶುಭ: 12, 16, 22

ಅಶುಭ: 14, 18, 25

**
ವೃಷಭ: ಕಲಾವಿದರಿಗೆ ಉತ್ತಮ ಸಮಯ. ಉತ್ತಮ ಅವಕಾಶ. ಸರಕಾರಿ ಕೆಲಸಗಳಲ್ಲಿ ಯಶಸ್ಸು. ಗೃಹ ನಿರ್ಮಾಣ ಅಥವಾ ನೂತನ ಮನೆ ಕೊಳ್ಳುವ ಯೋಗ.‌ತಿಂಗಳ ಉತ್ತರಾರ್ಧದಲ್ಲಿ ಮನದಸ್ಸಿನ ದುಃಖಗಳು ದೂರಾಗುವವು. ಉನ್ನತ ಪದವಿದರರಿಗೆ ಉತ್ತಮ ನೌಕರಿ ಯೋಗವಿದೆ.

ಶುಭ: 14, 22, 28

ADVERTISEMENT

ಅಶುಭ: 07, 12,23

**
ಮಿಥುನ: ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿನ್ನಡೆ. ವಾಹನ ಖರೀದಿ ಯೋಗವಿದೆ. ಉದ್ಯೋಗ ವ್ಯವಹಾರದಲ್ಲಿ ಭಡ್ತಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಚರ್ಮವ್ಯಾದಿ, ಹೊಟ್ಟೆನೊವು ಕಾಣಿಸಿಕೊಳ್ಳಬಹುದು. ಅನಗತ್ಯ ಅಲೆದಾಟ ಸಾಧ್ಯತೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುವಿರಿ.

ಶುಭ: 10,15, 27

ಅಶುಭ: 11, 16, 22

**
ಕರ್ಕಾಟಕ: ಸಮಾಜದಲ್ಲಿ ಉತ್ತಮ ಮಾನ ಸನ್ಮಾನ ಯೋಗ. ವಿವಿಧ ಮೂಲಗಳಿಂದ ಧನಲಾಭ. ದೈಹಿಕವಾಗಿ ಪಿತ್ತ ವ್ಯಾಧಿ ನರ ಸಂಬಂಧಿ ಖಾಯಿಲೆ ಕಾಣಿಸಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನೆಗೆ ಬಂಧು ಮಿತ್ರರ ಆಗಮನ.

ಶುಭ: 11, 14, 25

ಅಶುಭ: 16, 20, 28

**
ಸಿಂಹ: ಸಾಮಾಜಿಕ ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ. ಕೆಲಸ ಕಾರ್ಯಗಳಲ್ಲಿ ಬಹಳ ಶ್ರಮ ವಹಿಸುತ್ತಿರಿ. ಬಹಳ ವರ್ಷಗಳಿಂದ ಆಗದೇ ಇರುವ ಕಾರ್ಯವೊಂದು ಬಂಧು ಮಿತ್ರರ ಸಹಾಯದಿಂದ ಶುಭವಾಗುವುದು. ಕೋರ್ಟ್ ವ್ಯವಹಾರಗಳಿದ್ದರೆ ಸಮಾಧಾನಕರ ಹಂತ ತಲುಪುದು.

ಶುಭ: 10, 18, 28

ಅಶುಭ: 15, 20, 26

**
ಕನ್ಯಾ: ನೆರೆ ಹೊರೆಯವರಿಂದ ಉತ್ತಮ ಸಹಕಾರ. ಮನೆಯಲ್ಲಿ ಮಂಗಳ ಕಾರ್ಯ. ಆರ್ಥಿಕ ಸ್ಥಿತಿ ಉತ್ತಮ. ಕಣ್ಣಿನ ತೊಂದರೆ ಕಾಣಿಸಿಕೊಳ್ಳುಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ಉತ್ತಮ ಲಾಭ. ವಾಣಿಜ್ಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭ.

ಶುಭ: 14, 18, 26

ಅಶುಭ: 12, 19, 22

**
ತುಲಾ: ಹತ್ತಿರದ ಬಂಧುಗಳಿಗೆ ನಿಮ್ಮ ಸಹಾಯದ ಅವಶ್ಯಕತೆ ಬರುವುದು. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ತೊಂದರೆ, ಕಿರಿಕಿರಿ. ಕೃಷಿ ಮತ್ತು ಪಶುಪಾಲನೆ ವ್ಯವಹಾರದವರಿಗೆ ನಷ್ಟ. ಅವಿವಾಹಿತರಿಗೆ ವಿವಾಹ ಭಾಗ್ಯ. ವಾಹನ ಖರೀದಿಗೆ ಉತ್ತಮ ಅವಕಾಶ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು.

ಶುಭ: 14, 18, 22

ಅಶುಭ: 16, 23, 29

**
ವೃಶ್ಚಿಕ: ಸಹೋದರರಿಂದ ಸಹಾಯ ಸಹಕಾರ. ಸ್ನೇಹಿತರಿಂದ ಆರ್ಥಿಕ ಸಹಾಯ. ಮಕ್ಕಳಿಂದ ಶುಭ ವಾರ್ತೆ. ಶಿಕ್ಷಣ ಹಣಕಾಸು ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಡ್ತಿ. ನೂತನ ಮನೆ ಅಥವಾ ಭೂಮಿ ಖರೀದಿಗೆ ಸಕಾಲ. ಆರೋಗ್ಯದ ಬಗ್ಗೆ ಎಚ್ಚರ.

ಶುಭ: 14, 19, 29

ಅಶುಭ: 18, 21, 25

**
ಧನಸ್ಸು: ಹೊಸ ಉದ್ಯೋಗವಕಾಶ. ಅರ್ಹ ಪದವಿದರರಿಗೆ ನೌಕರಿ ಸಿಗುವ ಯೋಗ. ಸಾಹಿತ್ಯ ಸಂಗೀತ ತಜ್ಞರಿಗೆ ಗೌರವ. ಸರ್ಕಾರಿ ನೌಕರಿಯಲ್ಲಿರುವವರಿಗೆ ಮಾನಸಿಕ ಕಿರಿಕಿರಿ. ಮನೆಯ ಹಿರಿಯರೊಂದಿಗೆ ಮಧುರ ಸಂಬಂಧ ಏರ್ಪಡುವುದು.

ಶುಭ: 09, 16, 22

ಅಶುಭ: 11, 15, 23

**
ಮಕರ: ಹಣಕಾಸು ವ್ಯವಹಾರವನ್ನು ಬಹಳ ಎಚ್ಚರಿಕೆಯಿಂದ ನಡೆಸಿ. ಖರ್ಚು ಹೆಚ್ಚಾಗಬಹುದು. ಗುಡಿ ಕೈಗಾರಿಕಾ ಉದ್ಯಮದವರಿಗೆ ಹೆಚ್ಚು ಅನುಕೂಲ. ವಿಧ್ಯಾರ್ಥಿಗಳಿಗೆ ಆಲಸ್ಯದಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಭೂಮಿ, ಚಿನ್ನ ಖರೀದಿ ಬಗ್ಗೆ ವಿಶೇಷ ಆಸಕ್ತಿ ತೋರಿಸುವಿರಿ.

ಶುಭ: 11, 14, 25

ಅಶುಭ: 13, 26, 29

**
ಕುಂಭ: ಕೃಷಿಕರಿಗೆ ಲಾಭ. ಆಕಸ್ಮಿಕ ಭೂಮಿ ಖರೀದಿ ಯೋಗವಿದೆ. ಹಣಕಾಸು ಸಂಸ್ಥೆಯನ್ನು ಹೊಂದಿರುವವರಿಗೆ ಲಾಭ. ವೈಜ್ಞಾನಿಕ ಕ್ಷೇತ್ರದಲ್ಲಿರುವವರಿಗೆ ಭಡ್ತಿ. ವಿಧ್ಯಾರ್ಥಿಗಳಿಗೆ ಶುಭ.ಸಂಧಿವಾತ ಕಾಣಿಸಿಕೊಳ್ಳಬಹುದು, ಎಚ್ಚರದಿಂದಿರಿ.

ಶುಭ: 14, 19, 22,

ಅಶುಭ: 12, 23, 26

**
ಮೀನ: ಸಮಾಜದಲ್ಲಿ ಗೌರವಾದರಗಳು ಸಿಗಲಿವೆ. ಹಣಕಾಸಿನ ವಿಚಾರದಲ್ಲಿ ಕೆಲವರು ಆಪ್ತಮಿತ್ರರಂತೆ ನಟಿಸಿ ಮೋಸ ಮಾಡಬಹುದು. ಎಚ್ಚರಿಕೆಯಿಂದ ಇರಿ. ಶೇರು ವ್ಯವಹಾರದಲ್ಲಿ ಉತ್ತಮ ಲಾಭ. ವಾಹನ ಖರೀದಿ ಯೋಗವಿದೆ. ಮನೆಗೆ ಅಲಂಕಾರಿಕ ವಸ್ತು ಪೀಠೋಪಕರಣ ಖರೀದಿ ಮಾಡುವಿರಿ. ತಿಂಗಳ ಕೊನೆಯಲ್ಲಿ ಮನೆಯಲ್ಲಿ ಸಂತಸದ ವಾತಾವರಣ ಇರುವುದು.

ಶುಭ: 14, 20 28

ಅಶುಭ: 18, 23, 29

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.