ADVERTISEMENT

ಸಂಸ್ಕೃತಿ ಸಂಭ್ರಮ | ಮನೀಷಾಪಂಚಕ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 19:45 IST
Last Updated 22 ಏಪ್ರಿಲ್ 2020, 19:45 IST

ಆಚಾರ್ಯ ಶಂಕರರ ಪ್ರಸಿದ್ಧ ರಚನೆಗಳಲ್ಲೊಂದು ’ಮನೀಷಾಪಂಚಕ‘ ಎಂಬ ಆಧ್ಯಾತ್ಮಿಕ ಕಾವ್ಯ.

ಕಾಶಿ ವಿಶ್ವನಾಥನ ದರ್ಶನಕ್ಕಾಗಿ ಶಂಕರರು ಮುನ್ನಡೆಯುತ್ತಿದ್ದಾಗ, ದಾರಿಯಲ್ಲಿ ನಾಲ್ಕು ನಾಯಿಗಳೊಂದಿಗೆಚಾಂಡಾಲನು ಬರುತ್ತಿದ್ದಾನೆ. ’ದೂರನಿಲ್ಲು, ಅತ್ತ ಹೋಗು‘ ಎಂದು ಶಂಕರರು ಸಂಕೇತಿಸಿದಾಗ, ಚಾಂಡಲನ ಪ್ರಶ್ನೆಗಳು ಮತ್ತು ಅದಕ್ಕೆ ಶಂಕರರ ಸೂತ್ರರೂಪಿ ಪ್ರತಿಕ್ರಿಯೆ ಹೀಗಿವೆ (ಕೆಲವೊಂದು ಸಾಲುಗಳನ್ನು ಮಾತ್ರವೇ ಇಲ್ಲಿ ಕೊಡಲಾಗಿದೆ):

ಪ್ರವೇಶ: ಹೋಗತ್ತ ದೂರನಿಲ್ಲೆನುವೆಯಲಯತಿವರನೆ ಅರ್ಥವೇಆಗಲಿಲ್ಲ ನನಗೆ, ಅರಿಯದವನಾ ಯಾರು ಯಾರಿಗೆ ಯಾರಿಂದ ಯಾರು ದೂರ ಹತ್ತಿರಅನ್ನದಿಂದಾದ ಈ ದೇಹದಿಂದ ಆ ದೇಹ ಶರೀರ–ಶರೀರಗಳು ದೂರವಾಗಬೇಕೆನುವಿಯಾದೂರವೇ ಇವೆಯಲ್ಲ? ಹೋಗುವುದೆಲ್ಲಿ? ಹೇಳು ಯತಿಯೇ ಹೇಳು.

ADVERTISEMENT

ಪಂಚಕ: ಜಗವೆಲ್ಲ ಇದ್ದು ತೆರೆ ತೆರೆ ಮರೆಯೊಳಗಿರುವ ಆ ದೊಡ್ಡದೊಂದೇ ಎರಡಿಲ್ಲದಿರೆ ಸ್ಚಚ್ಛಸ್ಥಿರ ಮನದೊಳಿಂತು ನೆನೆದಾಗಲಾ ಬುದ್ಧಿ ಪಾವನ ಪಾವಕನಲಿ ಸುಟ್ಟು ಹೋಗುವುದಾ ಹುಟ್ಟುಕಟ್ಟುಗಳು
ಎಂದಾರಿರವನೋ ಅವನಾವನಾದರೇನು ಗುರುವೇ ಹೇಳು

ಯೋಗಿಯಾತನೆ ಅವನಿಗಾವುದೋ ಜಾತಿ
ಅವನ ನಿಜದರಿವೆ ರೀತಿ ನೀತಿ
ಆ ಬ್ರಹ್ಮದರಿವನೊಳಗೆ ಅರಿತರೂ
ಮೋಡದೊಳಗೇಂ ಅಡಗುವದೆ ಸೂರ್ಯನ ಗುರುತು
ಎಂದಾತನರಿತು ಅದರಲ್ಲಿ ಇರಿಸಿದ ಮನ
ಗುರುವವನೆ ಗುರುವೆಂಬುದೆನ್ನ ಮನ ಮಂದಟ್ಟು

ತನ್ನರಿವೆ ಬ್ರಹ್ಮದರಿವಿನ ಅರಿವೆ
ಅದರದೊಂದು ನೂಲು ಸಾಕೇ ಸಾಕು ಗುರುವೆ
ಅರಿವಿನನಂತ ಸಮುದ್ರದಲಿ ಮುಳುಗಿ
ಪೂರ್ಣದರಿವನ್ನುಂಟುಮಾಡುವ ಉದ್ಬುದ್ಧನಿಗೆ ಇಂದ್ರಾದಿಗಳೇನು ಮಹಾ
ಆ ಅಂಥಾ ಗುರು ಯಾವಾನಾದರೂ ಸರಿ
ಎಲ್ಲರಿಗಿಂತ ಮೇಲು
ಇದೊ ನಿನಗೆರಗುವೆ ಎಸಗುವೆ
ಉದ್ದಂಡ ಪ್ರಣಾಮ
ಐವರಿಗೂ ಒಟ್ಟಿಗೆ
ಮೇಲು ಕೀಳಾಗಲೊಂದೇ ಜನ
ಇದೋ ನಿಜ ಕೊನೆಯರಿವೆಂಬುದೆನ್ನ ಮನ
ಪಂಚಪ್ರಾಣ ಪ್ರಣವ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.