ADVERTISEMENT

ಬೆಳಕು ದೇವರ ಸ್ವರೂಪ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 4:40 IST
Last Updated 1 ಡಿಸೆಂಬರ್ 2021, 4:40 IST

ದೇವರ ಸ್ವರೂಪವಾದ ಬೆಳಕು, ನಿಸರ್ಗ ನೀಡಿದ ಅದ್ಭುತ ಕೊಡುಗೆ. ನಮ್ಮ ಜೀವನ ಮುಂದುವರೆಯಲು ಕಾರಣವಾದ ಸೂರ್ಯನನ್ನು ನಾವು ಸದಾ ಕೃತಜ್ಞತಾ ಭಾವದಿಂದ ನೋಡಬೇಕು. ಏಕೆಂದರೆ, ಕತ್ತಲಲ್ಲಿ ನಮ್ಮ ಜೀವನ ನಡೆಯದು.

ಎಲ್ಲೆಲ್ಲಿಯೂ ಬೆಳಕು. ಅನಂತ ಆಕಾಶದಲ್ಲಿ, ಅಗಾಧ ಬಯಲಲ್ಲಿ, ನಮ್ಮ ಜೀವನದ ತರಂಗಗಳಲ್ಲಿ ಬೆಳಕು. ಬೆಳಕಿಲ್ಲದ ಸ್ಥಳ ಯಾವುದು? ಅದಕ್ಕೆ ಭಾರತೀಯ ಜ್ಞಾನಿಗಳು ‘ಬೆಳಕನ್ನು ದೇವರು’ ಎಂದು ಕರೆದರು. ಈ ಬೆಳಕೆ ಇಲ್ಲದಿದ್ದರೆ ನಮ್ಮ ಜೀವನ ಬಹು ಕಷ್ಟವಾಗುತ್ತಿತ್ತು. ಸೂರ್ಯ ಪ್ರತಿದಿನ ಹೊಮ್ಮುತ್ತಾನೆ ಎನ್ನುವ ಕಾರಣಕ್ಕೆ ನಾವು ಬದುಕಿದ್ದೇವೆ.

ಹೀಗಾಗಿ ಸೂರ್ಯ ಸ್ವಯಂ ದೇವರೇ ಆಗಿದ್ದಾನೆ. ಸೂರ್ಯನಿಂದ ನಾವು ಸುಖಿಗಳಾಗಿದ್ದೇವೆ. ಸೂರ್ಯನಿಂದ ನಮ್ಮ ಮುಖದ ಮೇಲೆ ಕಳೆ ಇದೆ. ಆತನಿಗೆ ಮೇಲು ಕೀಳು, ಬಡವ ಬಲ್ಲಿದ ಎಂಬ ಯಾವ ಬೇಧಗಳಿಲ್ಲ. ದೇವರು ಬೆಳಕಿನ ಸ್ವರೂಪದಲ್ಲೇ ಬರುತ್ತಾನೆ. ದೇವರ ಅಸ್ತಿತ್ವ ಅವನ ಈ ನಿಸರ್ಗದಿಂದ ನಾವು ಪ್ರತಿ ಕ್ಷಣ ಆನಂದಿಸಬಹುದು.

ADVERTISEMENT

ಮನುಷ್ಯ ಕಣ್ಣು ತೆರೆದರೆ ಸಾಕು ಅವನ ಎದುರು ಇಡೀ ಪೃಕೃತಿಯ ಸೌಂದರ್ಯವೇ ಇದೆ. ಅದೆ ಆನಂದ‌ ನೀಡುವ ಮುಖ್ಯ ಅಂಶ. ಹೃದಯ ತುಂಬಿ, ನಿಜವಾದ ಭಾವದಿಂದ ಅನುಭವಿಸಬೇಕು. ಹರಿದಾಸ ಎಂಬ ಭಕ್ತನ ಜೀವನ ನೋಡಿದಾಗ ಇದು ಅನುಭವ ವೇದ್ಯವಾಗುತ್ತದೆ. ಆತನ ಹಾಡು ಎಷ್ಟೊಂದು ಪರಿಣಾಮ ಬೀರುತ್ತಿತ್ತು ಎಂದರೆ, ಯಮುನೆಯ ಅಲೆಗಳೊಂದಿಗಿನ ನರ್ತನಕ್ಕೆ ಸ್ವತಃ ಶ್ರೀ ಕೃಷ್ಣನೇ ಸಾಕ್ಷಿಯಾಗುತ್ತಿದ್ದ. ದೇವರನ್ನು ಹುಡುಕಿಕೊಂಡು ಹೋಗುವುದಕ್ಕಿಂತ ಇದ್ದ ಪರಿಸರದಲ್ಲಿಯೇ ದೇವರನ್ನು ಹುಡುಕುವುದು ಮತ್ತು ಆತನ ಇರುವಿಕೆ ಅನುಭವಿಸುವುದು ಶ್ರೇಷ್ಠವಾದದ್ದು.

ಸಂಗ್ರಹ: ನಾಗೇಶ ಮುದ್ದಾಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.