ADVERTISEMENT

ಸೋದೆಯಲ್ಲಿ ಶ್ರೀದ್ವಯರ ಚಾತುರ್ಮಾಸ್ಯ ವ್ರತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 14:14 IST
Last Updated 3 ಜುಲೈ 2020, 14:14 IST
ವಿಶ್ವವಲ್ಲಭ ತೀರ್ಥ ಸ್ವಾಮೀಜಿ 
ವಿಶ್ವವಲ್ಲಭ ತೀರ್ಥ ಸ್ವಾಮೀಜಿ    

ಶಿರಸಿ: ತಾಲ್ಲೂಕಿನ ಸೋದೆ ವಾದಿರಾಜ ಮಠಾಧೀಶ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತವು ಜುಲೈ 5ರಿಂದ ಸೆಪ್ಟೆಂಬರ್ 2ರವರೆಗೆ ಸೋದೆ ಮಠದಲ್ಲಿ ನಡೆಯಲಿದೆ. ಈ ಬಾರಿ ತೀರ್ಥಹಳ್ಳಿ ಅಚ್ಯುತಪ್ರೇಕ್ಷ ಸಂಸ್ಥಾನ ಭೀಮನಕಟ್ಟೆ, ಶ್ರೀಭೀಮಸೇತು ಮುನಿವೃಂದ ಮಠದ ರಘುವರೇಂದ್ರ ತೀರ್ಥ ಸ್ವಾಮೀಜಿ ಕೂಡ ಇದೇ ಮಠದಲ್ಲಿ ಚಾತುರ್ಮಾಸ್ಯ ವ್ರತ ನಡೆಸಲಿದ್ದಾರೆ.

ಚಾತುರ್ಮಾಸ್ಯದ ಸಂದರ್ಭದಲ್ಲಿ ವೃಂದಾವನಾಚಾರ್ಯರ ಆರಾಧನೆ, ನಾಗರಪಂಚಮಿ, ಚಾಂದ್ರ ಕೃಷ್ಣಜನ್ಮಾಷ್ಟಮಿ ಗಣೇಶ ಚೌತಿ, ಭೂವರಾಹ ಜಯಂತಿ, ಹಯಗ್ರೀವ ಜಯಂತಿ ಹಾಗೂ ಆಗಸ್ಟ್ 24ರಂದು ವಿಶ್ವೋತ್ತಮ ತೀರ್ಥ ಶ್ರೀಗಳ ಮಹಾಸಮಾರಾಧನೆ ನಡೆಯಲಿದೆ. ಕೋವಿಡ್ 19 ಕಾರಣಕ್ಕೆ ದೇವರು, ಗುರುಗಳ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಭಕ್ತರು ಅವರು ಇರುವಲ್ಲಿಯೇ ಪ್ರಾರ್ಥನೆ ಸಲ್ಲಿಸುವಂತೆ ಶ್ರೀಗಳು ಆಶಿಸಿದ್ದಾರೆ.

ಶ್ರೀಮಠದ ಎಲ್ಲಾ ಕಾರ್ಯಕ್ರಮಗಳನ್ನು ಶ್ರೀಮಠದ ವೆಬ್ಸೈಟ್ sodematha.in ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಬಹುದು. ಸೇವೆ ಸಲ್ಲಿಸಲಿಚ್ಛಿಸುವ ಭಕ್ತರು ಆನ್‌ಲೈನ್‌ನಲ್ಲಿ https://sodematha.in/online-seva ಮೂಲಕ ಸಲ್ಲಿಸಬಹುದು ಎಂದು ಮಠದ ಪ್ರಮುಖರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.