ADVERTISEMENT

ವಚನಾಮೃತ: ನಂಬಿಕೆಯನ್ನು ಕಳೆದುಕೊಳ್ಳಬಾರದು

ಡಾ.ಅಲ್ಲಮಪ್ರಭು ಸ್ವಾಮೀಜಿ
Published 10 ಮಾರ್ಚ್ 2021, 5:58 IST
Last Updated 10 ಮಾರ್ಚ್ 2021, 5:58 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ನಂಬರು ನೆಚ್ಚರು ಬರಿದೆ ಕರೆವರು,

ನಂಬಲರಿಯರೀ ಲೋಕದ ಮನುಜರು!

ನಂಬಿ ಕರೆದಡೆ ಓ ಎನ್ನನೆ ಶಿವನು?

ADVERTISEMENT

ನಂಬದೆ ನೆಚ್ಚದೆ ಬರಿದೆ ಕರೆವರ

ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ!

ನಂಬಿಕೆ ಎನ್ನುವುದು ಮನುಷ್ಯನ ಜೀವನದಲ್ಲಿ ಬಹುಮುಖ್ಯವಾದುದು. ನಮ್ಮ ಜೀವನದ ಎಲ್ಲ ಸಂದರ್ಭಗಳಲ್ಲೂ ನಂಬಿಕೆಯಿಂದಲೇ ನಾವು ಬದುಕಬೇಕಾಗುತ್ತದೆ. ಪ್ರಸ್ತುತ ದಿನಮಾನದಲ್ಲಿ ಈ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ನಂಬಿದವರೇ ಗೋಣ ಕೋಯ್ವರು ಎಂಬಂತೆ ಹತ್ತಿರದವರಿಂದಲೇ ಮೋಸಕ್ಕೆ ಒಳಗಾಗುತ್ತೇವೆ. ಇಂತಹ ಸ್ಥಿತಿಯನ್ನು ಬಸವಣ್ಣನವರು ಈ ವಚನದ ಮೂಲಕ ತಿಳಿಸಿಕೊಟ್ಟಿದ್ದಾರೆ.

ಭಗವಂತನ ಆರಾಧನೆಯನ್ನು ನಾವು ಯಾವ ರೀತಿಯಾಗಿ ಮಾಡಬೇಕು ಎನ್ನುವುದನ್ನು ತಿಳಿಸಿದ್ದಾರೆ. ಜಗತ್ತಿನ ಜನರು ಭಗವಂತನನ್ನು ಆರಾಧಿಸುತ್ತಾರೆ. ಆದರೆ, ಅವನ ಮೇಲೆ ಶ್ರದ್ಧೆ, ಭಕ್ತಿ, ನಂಬಿಕೆ ಹೊಂದಿರುವುದಿಲ್ಲ. ಭಗವಂತನನ್ನು ಅರಿಯುವ ಮಾರ್ಗವೇ ಜನರಿಗೆ ಗೊತ್ತಿಲ್ಲ. ನಂಬಿಕೆಯಿಂದ ಪ್ರಾರ್ಥಿಸಿದರೆ ಆ ದೇವರು ಒಲಿಯುವುದಿಲ್ಲವೇ? ನಂಬದೆ, ನೆಚ್ಚದೆ ಭಗವಂತನನ್ನು ಆರಾಧಿಸಿದರೆ, ಅದು ಅಹಂಕಾರವನ್ನು ಮನದಲ್ಲಿ ಇಟ್ಟುಕೊಂಡು ಆರಾಧಿಸಿದಂತೆ ಆಗುತ್ತದೆ ಎನ್ನುವುದು ಈ ವಚನದ ತಾತ್ಪರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.