ADVERTISEMENT

ವಚನಾಮೃತ: ಸ್ವಾರ್ಥಕ್ಕಾಗಿ ಪೂಜಿಸಿದರೆ ಫಲ ಸಿಗದು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 5:11 IST
Last Updated 1 ಡಿಸೆಂಬರ್ 2021, 5:11 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

–––

ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ

ADVERTISEMENT

ಅಂಬೆ, ಅಂಬೆ ಎಂದು ಕರೆವುತ್ತಲಿದ್ದೇನೆ;

ಅಂಬೆ, ಅಂಬೆ ಎಂದು ಒರಲುತ್ತಲಿದ್ದೇನೆ.

ಕೂಡಲಸಂಗಮದೇವ ಬಾಳು ಬಾಳೆಂಬನ್ನಕ್ಕ!

ಕಾಡಿನಲ್ಲಿ ಆಹಾರವನ್ನು ಅರಸುತ್ತಾ ಹೋಗಿರುವ ಆಕಳ ಕರುವು ದಾರಿ ಕಾಣದೆ ತನ್ನ ತಾಯಿಗಾಗಿ ಹಂಬಲಿಸುವಂತೆ, ಮಾನವನು ಕೂಡ ಈ ಪ್ರಪಂಚವೆಂಬ ಕಾಡಿನಲ್ಲಿ ಬಂದು, ತನ್ನ ನಿಜವಾದ ದಾರಿ ಕಾಣದೆ ಚಿತ್ತ ಚಾಂಚಲ್ಯದಿಂದ ಅಲೆದಾಡುತ್ತಿದ್ದಾನೆ. ಭಗವಂತನಿಗಾಗಿ ನಾವು ಭಕ್ತಿ, ಶ್ರದ್ಧೆ, ನಿಷ್ಠೆಯಿಂದ ಪ್ರಾರ್ಥನೆ, ಸೇವೆ ಸಲ್ಲಿಸಿದರೆ ಖಂಡಿತವಾಗಿಯೂ ನಮಗೆ ಒಳ್ಳೆಯದಾಗುತ್ತದೆ. ಆದರೆ, ನಮ್ಮ ಪ್ರಾರ್ಥನೆಯು ಸ್ವಾರ್ಥದಿಂದ ಕೂಡಿರುವುದರಿಂದ ಯಾವುದೇ ಫಲವು ಸಿಗದೆ ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ನಾವು ಸಾಗಿಸುವ ಜೀವನ ನಿಸ್ವಾರ್ಥದಿಂದ ಕೂಡಿದರೆ ಭಗವಂತನ ಕೃಪಾಕಟಾಕ್ಷಕ್ಕೆ ಒಳಗಾಗಿ ಸನ್ಮಾರ್ಗದ ಜೀವನ ಸಾಧ್ಯವಾಗುತ್ತದೆ ಎನ್ನುವುದು ಈ ವಚನದ ಸಾರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.