ADVERTISEMENT

ಒಳ್ಳೆಯವರ ಸಂಗದಿಂದ ದೇವರ ಸಾಕ್ಷಾತ್ಕಾರ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 7:17 IST
Last Updated 11 ನವೆಂಬರ್ 2020, 7:17 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಮಡಕೆಯ ಮಾಡುವಡೆ ಮಣ್ಣೆ ಮೊದಲು

ತೊಡಿಗೆಯ ಮಾಡುವಡೆ ಹೊನ್ನೆ ಮೊದಲು

ಶಿವಪಥವನರಿವಡೆ ಗುರುಪಥವೆ ಮೊದಲು

ADVERTISEMENT

ಕೂಡಲಸಂಗಮದೇವರನರಿವಡೆ

ಶರಣರ ಸಂಗವೆ ಮೊದಲು

ಯಾವುದೇ ಕಾರ್ಯ ಮಾಡಬೇಕಾದರೆ ನಮಗೆ ಮಾರ್ಗದರ್ಶನದ ಅವಶ್ಯಕತೆ ಇದೆ. ಪ್ರತಿಯೊಂದು ಕಾರ್ಯಕ್ಕೂ ಕಾರಣ ಇದ್ದೇ ಇರುತ್ತದೆಯೊ, ಹಾಗೆಯೇ ಪ್ರತಿಯೊಂದು ವಸ್ತುವಿನ ಹಿಂದೆ ಮೂಲವಸ್ತುವಿನ ಅವಶ್ಯಕತೆ ಇದ್ದೇ ಇರುತ್ತದೆ. ಉದಾಹರಣೆಗೆ ಮಡಕೆಯು ತಯಾರಾಗಬೇಕಾದರೆ ಅದಕ್ಕೆ ಮಣ್ಣು ಅವಶ್ಯವಾಗಿ ಬೇಕು. ಮಣ್ಣು ಇರದಿದ್ದರೆ ಮಡಕೆಯು ಇಲ್ಲ. ಆಭರಣಗಳು ತಯಾರಾಗಬೇಕಾದರೆ ಬಂಗಾರ ಬೇಕು.

ಹಾಗೆಯೇ ಭಗವಂತನನ್ನು ಅರಿಯಬೇಕಾದರೆ ಗುರುವಿನ ಮಾರ್ಗದರ್ಶನ ಬೇಕು. ಪ್ರತಿಯೊಬ್ಬರೂ ಬಾಲ್ಯದಲ್ಲಿ ಗುರುವಿನಿಂದ ಸಂಸ್ಕಾರಕ್ಕೆ ಒಳಗಾಗಿರುತ್ತಾರೆ. ಗುರುವಿನ ಮಾರ್ಗದರ್ಶನದಿಂದ ಭಗವಂತನ ಸ್ವರೂಪ ಮತ್ತು ಸಾಕ್ಷಾತ್ಕಾರ ಮಾತ್ರ ಸಾಧ್ಯ. ಹರ ಮುನಿದರೆ ಗುರು ಕಾಯುವ, ಗುರು ಮುನಿದರೆ ಹರ ಕಾಯಲಾರ ಎಂಬ ಮಾತಿನಲ್ಲಿ ಗುರುವಿನ ಮಹತ್ವವು ನಮಗೆ ತಿಳಿಯುತ್ತದೆ. ಭಗವಂತ ನಮ್ಮ ಮೇಲೆ ಕೋಪಗೊಂಡರೆ ಗುರುವಿನ ರಕ್ಷಣೆಯಿಂದ ನಾವು ಪಾರಾಗಬಹುದು. ಆದರೆ, ನಾವು ಗುರುವಿನ ಕೋಪಕ್ಕೆ ತುತ್ತಾದರೆ ಭಗವಂತನು ನಮ್ಮನ್ನು ರಕ್ಷಣೆ ಮಾಡುವುದಿಲ್ಲ. ಒಳ್ಳೆಯವರ ಸಂಗದಿಂದ ನಾವು ಭಗವಂತನ ಸಾಕ್ಷಾತ್ಕಾರ ಪಡೆಯಬಹುದು ಎನ್ನುವುದನ್ನು ಬಸವಣ್ಣ ಅವರು ಈ ವಚನದ ಮೂಲಕ ತಿಳಿಸಿದ್ದಾರೆ.

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ ಮತ್ತು ತುಬಚಿ ಮಠ, ಬೆಳಗಾವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.