ADVERTISEMENT

ವಚನಾಮೃತ: ಸಂಸ್ಕಾರದಿಂದ ಮೌಲ್ಯ ಹಚ್ಚಿಸಿಕೊಳ್ಳೋಣ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 4:49 IST
Last Updated 9 ಮಾರ್ಚ್ 2022, 4:49 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

–––––––

ನೀರಿಂಗೆ ನೈದಿಲೆಯೆ ಶೃಂಗಾರ

ADVERTISEMENT

ಸಮುದ್ರಕ್ಕೆ ತೆರೆಯೆ ಶೃಂಗಾರ

ನಾರಿಗೆ ಗುಣವೆ ಶೃಂಗಾರ

ಗಗನಕ್ಕೆ ಚಂದ್ರಮನೆ ಶೃಂಗಾರ

ನಮ್ಮ ಕೂಡಲಸಂಗನ ಶರಣರಿಗೆ

ನೊಸಲ ವಿಭೂತಿಯೆ ಶೃಂಗಾರ

ಪ್ರತಿಯೊಂದು ವಸ್ತುವಿನ ಮೌಲ್ಯ ಹೆಚ್ಚಾಗಲು ಮತ್ತೊಂದು ವಸ್ತುವು ಅವಶ್ಯಕವಾಗಿದೆ. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವಿಗೆ ಅನುರೂಪವಾಗಿ ಇನ್ನೊಂದು ವಸ್ತು ಇದ್ದೇ ಇರುತ್ತದೆ. ಆ ಇನ್ನೊಂದು ಮೊದಲನೆ ವಸ್ತುವಿನೊಡನೆ ಕೂಡುವುದರಿಂದ ಮೌಲ್ಯ ಹೆಚ್ಚುತ್ತದೆ. ಅದನ್ನೆ ಬಸವಣ್ಣನವರು ತುಂಬಾ ಸೊಗಸಾಗಿ ಈ ವಚನದ ಮೂಲಕ ವಿವರಿಸಿದ್ದಾರೆ. ವಿಶಾಲವಾದ ಸರೋವರಕ್ಕೆ ಕಮಲದ ಹೂವುಗಳು ಶೋಭೆಯನ್ನು ಉಂಟು ಮಾಡುತ್ತವೆ. ಸಮುದ್ರಕ್ಕೆ ತೆರೆಗಳೆ ಶೋಭೆಯನ್ನುಂಟು ಮಾಡುತ್ತವೆ. ಮಹಿಳೆಗೆ ಅವಳ ಗುಣವೆ ಶೋಭೆಯನ್ನು ಕೊಡುತ್ತವೆ. ಹುಣ್ಣಿಮೆಯ ಬಾನಂಗಳವು ಚಂದ್ರಮನಿಂದಲೇ ಕಂಗೊಳಿಸುತ್ತದೆ. ನಮ್ಮ ಶಿವಶರಣರ ನೊಸಲಿಗೆ ವಿಭೂತಿಯೇ ಶೃಂಗಾರವಾಗಿ ಕಾಣುತ್ತದೆ. ಇಲ್ಲಿ ವಿಭೂತಿಯ ಮಹತ್ವವನ್ನು ಹಲವು ಉದಾಹರಣೆಗಳನ್ನು ಕೊಡುವುದರ ಮೂಲಕ ಬಸವಣ್ಣನವರು ವಿವರಿಸಿದ್ದಾರೆ. ಉತ್ತಮ ಸಂಸ್ಕಾರದಿಂದ ಮೌಲ್ಯ ಹೆಚ್ಚಿಸಿಕೊಳ್ಳೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.