ADVERTISEMENT

ವಚನಾಮೃತ: ಭಕ್ತಿ, ಶ್ರದ್ಧೆಯೆ ಪೂಜಾ ಪರಿಕರವಾಗಲಿ

ಡಾ.ಅಲ್ಲಮಪ್ರಭು ಸ್ವಾಮೀಜಿ
Published 30 ಮಾರ್ಚ್ 2022, 7:24 IST
Last Updated 30 ಮಾರ್ಚ್ 2022, 7:24 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಅಕಟಕಟಾ ಬೆಡಗು ಬಿನ್ನಾಣವೆಂಬುದೇನೊ!

ಓಂ ನಮಃ ಶಿವಾಯ ಎಂಬುದೆ ಮಂತ್ರ;

ಓಂ ನಮಃ ಶಿವಾಯ ಎಂಬುದೆ ತಂತ್ರ;

ADVERTISEMENT

ನಮ್ಮ ಕೂಡಲಸಂಗಮದೇವರ ನೆನೆವುದೆ ಮಂತ್ರ.

ಭಗವಂತನ ಪೂಜೆ ಮಾಡುವಾಗ ಆಡಂಬರವೆ ಹೆಚ್ಚಾಗಿ ತೋರುತ್ತದೆ. ನಮ್ಮ ಪೂಜೆ ಸರಳವಾಗಿದ್ದರೂ ಅಲ್ಲಿ ಭಗವಂತನ ಮೇಲಿರುವ ನಮ್ಮ ನಿಷ್ಠೆಯು ಪ್ರಮುಖವಾಗುತ್ತದೆ. ಭಕ್ತಿ, ಶ್ರದ್ಧೆ, ನಿಷ್ಠೆಗಳೆ ನಮ್ಮ ಪೂಜಾ ಪರಿಕರಗಳಾಗಬೇಕು. ಮನದಲ್ಲಿ ಅವನ ನಾಮಸ್ಮರಣೆಯೆ ತುಂಬಿರಬೇಕು. ಓಂ ನಮಃ ಶಿವಾಯ ಎನ್ನುವುದೇ ಸರ್ವಸ್ವವಾಗಬೇಕು. ಆದರೆ, ಇತ್ತೀಚೆಗೆ ನಾವು ನೋಡುತ್ತಿರುವಂತೆ ಆಡಂಬರದ ಪೂಜೆಗಳೆ ಹೆಚ್ಚಾಗಿವೆ. ಅಲ್ಲಿ ಭಕ್ತಿ ಶ್ರದ್ಧೆಗಳಿಗಿಂತ ಆಡಂಬರದ ಅಲಂಕಾರಯುಕ್ತ ಪೂಜೆಗಳೆ ಜಾಸ್ತಿಯಾಗಿರುತ್ತವೆ. ಸದಾಕಾಲ ಭಗವಂತನ ನೆನೆವುದು ನಮ್ಮ ಆದ್ಯತೆಯಾಗಬೇಕು. ಅಂದಾಗ ಜೀವನ ಸಾರ್ಥಕವಾಗುತ್ತದೆ. ಆಡಂಬರ ಅಲಂಕಾರದ ಪೂಜೆಗಿಂತ ಭಕ್ತಿಯಿಂದ ಭಗವಂತನ ನಾಮಸ್ಮರಣೆಯೇ ಪೂಜೆಯಾಗಬೇಕು.

– ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.