ADVERTISEMENT

ಡಾ.ಅಲ್ಲಮಪ್ರಭು ಸ್ವಾಮೀಜಿ ಬರಹ: ಎಲ್ಲರೂ ನಮ್ಮವರೆಂಬ ವಿಶಾಲ ಮನೋಭಾವವಿರಲಿ

ಪ್ರಜಾವಾಣಿ ವಿಶೇಷ
Published 12 ಜನವರಿ 2022, 19:30 IST
Last Updated 12 ಜನವರಿ 2022, 19:30 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಇವನಾರವ, ಇವನಾರವ

ಇವನಾರವನೆಂದೆನಿಸದಿರಯ್ಯಾ;

ಇವನಮ್ಮವ, ಇವನಮ್ಮವ

ADVERTISEMENT

ಇವನಮ್ಮವನೆಂದೆನಿಸಯ್ಯಾ

ಕೂಡಲಸಂಗಮದೇವಾ,

ನಿಮ್ಮ ಮನೆಯ ಮಗನೆಂದೆನಿಸಯ್ಯಾ.

ಸಕಲ ಜೀವಾತ್ಮಗಳಿಗೆ ಲೇಸನ್ನೇ ಬಯಸಿದ ಬಸವಾದಿ ಶಿವಶರಣರು ಸಕಲರಿಗೂ ಆದರ್ಶ ಪಥವನ್ನೂ ನಿರ್ಮಿಸಿದವರು. ಜಾತಿ, ಮತ, ಪಂಥಗಳ ಭೇದವಿಲ್ಲದೆ ಸರ್ವರಿಗೂ ಸಮ ಪಾಲು– ಸಮ ಬಾಳು ಎಂಬ ತತ್ವ– ಸಿದ್ಧಾಂತದಲ್ಲಿ ಬದುಕಿದವರು. ಜಗತ್ತಿಗೆ ಸಮಾನತೆಯ ಸಂದೇಶ ಸಾರಿದವರು ನಮ್ಮ ಶರಣರು. ಮಾನವೀಯತೆಯು ಅಮಾನವೀಯವಾಗುತ್ತಿರುವ ಈ ಸಂದರ್ಭದಲ್ಲಿ ವಿಶ್ವ ಗುರು ಬಸವಣ್ಣನವರ ಈ ಮೇಲಿನ ವಚನವು ಪ್ರಸ್ತುತ ಎನಿಸುತ್ತದೆ. ಎಲ್ಲರೂ ನನ್ನವರೆಂದಾಗ ದೊರೆಯುವ ಆನಂದವು ಬೇರೆ ಯಾವ ಸಂದರ್ಭದಲ್ಲೂ ದೊರೆಯುವುದಿಲ್ಲ. ಆದರೆ, ವಿಶಾಲ ಮನೋಭಾವವು ಕಡಿಮೆಯಾಗಿ ಸಂಕುಚಿತತೆ ತಾಂಡವವಾಡುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ಬಸವಣ್ಣನವರ ಈ ನುಡಿಪುಷ್ಪಗಳು ಸಕಲರ ಅಂತರಾಳದಲ್ಲಿ ಇಳಿದರೆ ಕೆಲವೊಂದಿಷ್ಟಾದರೂ ಬದಲಾವಣೆ ಸಾಧ್ಯವಾಗಬಹುದು ಎನ್ನುವ ಆಶಯ ನನ್ನದು.

–ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.