ADVERTISEMENT

ವಚನಾಮೃತ | ಯಥಾ ಭಕ್ತಿ, ತಥಾ ಶಕ್ತಿ

ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ 
Published 31 ಜುಲೈ 2020, 11:11 IST
Last Updated 31 ಜುಲೈ 2020, 11:11 IST
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ 
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ    

ದೇವರ ಮೇಲೆ ಇರುವ ನಂಬಿಕೆ, ಭಕ್ತಿ ಕೇವಲ ಗುಡಿಯಲ್ಲಿರುವ ದೇವರ ಮೇಲೆ ಇದ್ದರೆ ಸಾಲದು. ಪರಮಾತ್ಮ (ಸರ್ವಾಂತರಯಾಮಿ) ಎಲ್ಲ ಕಡೆಯೂ ಇದ್ದಾನೆ. ಅದಕ್ಕೆ ಬಸವಣ್ಣನವರು ತಮ್ಮ ವಚನದಲ್ಲಿ ‘ನಂಬಿ ಕರೆದೊಡೆ ಓ ಎನ್ನನೇ ಶಿವನು’ ಎಂದು ಬೋಧಿಸಿದ್ದಾರೆ.

‘ನಂಬಿ ಕೆಟ್ಟವರಿಲ್ಲವೋ ಜಗದಲ್ಲಿ ನಂಬದೆ ಕೆಟ್ಟರು’ ಎಂದು ಪುರಂದರ ದಾಸರು ಹೇಳಿದ ಮಾತು ಸತ್ಯವಾಗಿದೆ. ‘ನಂಬು ನಂಬಲೆ ಮನವೇ ಹಂಬಲಿಸದಿರು ಬರಿದೆ. ನಂಬುಗೆಯು ಕಾರಣವು ಸಾಂಬನೊಲಿಯುದಕ್ಕೆ’ ಎಂದು ಮಹಾತ್ಮರು ಹಾಡಿ ಭಕ್ತರನ್ನು ಎಚ್ಚರಿಸಿದ್ದಾರೆ. ಅದಕ್ಕಾಗಿ ಭಕ್ತರು ಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಬೇಕು.

ದೇವರನ್ನು ಗುಡಿಯಲ್ಲೇ ಪೂಜಿಸಲಿ, ಹೊರಗೆ ಪೂಜಿಸಲಿ. ಆದರೆ,ಅದರ ನಿಷ್ಠೆ ಒಂದಾದರೆ ಮಾತ್ರ ಫಲ ದೊರೆಯುವುದು. ಭಗವಂತನನ್ನು ಭಜಿಸುವ ಭಕ್ತ ಎಲ್ಲಿದ್ದರೆನು? ಅವನು ತನ್ನ ಹೆಂಡತಿ, ಮಕ್ಕಳು, ಬಂಧುಗಳನ್ನು ಬಿಟ್ಟು ದೂರದ ಅರಣ್ಯದಲ್ಲಿ ಏಕಾಂತವಾಸಿಯಾಗಬೇಕಾಗಿಲ್ಲ.

ADVERTISEMENT

ತಾನಿದ್ದಲ್ಲಿಯೇ ಶ್ರದ್ಧೆ, ನಿಷ್ಠೆಗಳಿಂದ ಪೂಜಿಸಿದರೆ ಅದರ ಫಲ ದೊರೆಯುವುದು. ಡೊಳ್ಳಿಗೆ ಹೊಡೆಯುವ ಪೆಟ್ಟು ಒಂದೇ ತೆರನಾಗಿರುವಂತೆ ಶಿವನನ್ನು ಪೂಜಿಸುವವನ ಪರಿ ಒಂದೇ ರೀತಿಯಲ್ಲಿರಬೇಕು. ಪೂಜಿಸುವ ವಿಧಾನ ಭಿನ್ನವಾಗಿದ್ದರೂ ದೇವರಿಗೆ ಅದು ಮುಖ್ಯವಲ್ಲ. ಮನಸ್ಸು, ನಿಷ್ಠೆ ಮುಖ್ಯ ಇದು ಸ್ಥಿರವಾಗಬೇಕು.

ಮನಸ್ಸಿನ ಚಂಚಲ ಪ್ರವೃತ್ತಿಯನ್ನು ಕಳೆದುಕೊಂಡರೆ ಪರಮಾತ್ಮನ ಪ್ರೀತಿಗೆ ಪಾತ್ರವಾಗುವರು. ಈ ಚಂಚಲ ಮನಸ್ಸನ್ನು ಸ್ಥಿರಗೊಳಿಸಿ ಎಲ್ಲಿ ಪ್ರಾರ್ಥಿಸಿದರು ದೇವರು ಪ್ರತ್ಯಕ್ಷನಾಗುವನು.

ಅಂತೆಯೇ, ದಾಸರು ‘ಹೆಸಿ ಗುಣಗಳನ್ನಿಟ್ಟುಕೊಂಡು ಕಾಶಿಗೆ ಹೋದಲ್ಲೇನೈತಿ’ ಎಂದು ಹಾಡಿಲ್ಲವೇ. ಅಂತೆಯೇ ಶಿವಶರಣರು ಭಕ್ತಿಯಿಲ್ಲದೆ ಅಲ್ಲಲ್ಲಿ ತಿರುಗುವ ಡಾಂಭಿಕರಿಗಾಗಿ ಮಾತಿನ ಚಾಟಿಯಿಂದ ಬೋಧಿಸಿದ್ದಾರೆ.

(ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಪದ್ಮರಾಜ ಒಡೆಯರ ಹಿರೇಮಠ, ಬಸವನಬಾಗೇವಾಡಿ)

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.