ADVERTISEMENT

ಅರಮನೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಲರವ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST

ಮೈಸೂರು: ದಸರಾ ಉತ್ಸವದ ಅಂಗವಾಗಿ ಅರಮನೆ ವೇದಿಕೆಯಲ್ಲಿ ಅಕ್ಟೋಬರ್ 16 ರಿಂದ 23ರ ವರೆಗೆ ಖ್ಯಾತನಾಮರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.

16 ರಂದು ರಾತ್ರಿ 7.30ಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ಎಲ್.ಸುಬ್ರಹ್ಮಣ್ಯ ಮತ್ತು ತಂಡದವರ ಪಿಟೀಲು ವಾದನದೊಂದಿಗೆ ಸಾಂಸ್ಕೃತಿಕ ದಸರಾ  ಕಾರ್ಯಕ್ರಮ ಆರಂಭಗೊಳ್ಳಲಿದೆ.

17 ರಂದು ಸಂಜೆ 6 ರಿಂದ 7.30ರ ವರೆಗೆ ಚಲನಚಿತ್ರ ಹಿನ್ನೆಲೆ ಗಾಯಕಿ ಲಕ್ಷ್ಮಿ ನಟರಾಜ್ ಮತ್ತು ತಂಡದಿಂದ ಭಾವಗೀತೆ.

ರಾತ್ರಿ 7.30 ರಿಂದ 9.30ರ  ವರೆಗೆ ಒಡಿಶಾದ ರತಿಕಾಂತ್ ಮಹೋಪಾತ್ರ ಮತ್ತು ತಂಡದಿಂದ ಒಡಿಶಿ ನೃತ್ಯ.
17 ರಂದು ಕರ್ನಾಟಕ ಪೊಲೀಸ್ ಬ್ಯಾಂಡ್, ಹೈದರಾಬಾದ್‌ನ ಮಲ್ಲಾಡಿ ಸಹೋದರರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ.

19 ರಂದು ಟಿ.ಎಸ್.ಮಣಿ ಅವರಿಂದ ವಾದ್ಯಗೋಷ್ಠಿ, ಮುಂಬೈನ ಖ್ಯಾತ ಹಿನ್ನೆಲೆ ಗಾಯಕ ತಲತ್  ಅಜೀಜ್ ಮತ್ತು ತಂಡದಿಂದ ಘಜಲ್ ಕಾರ್ಯಕ್ರಮ.

20 ರಂದು ಪುಣೆಯ ಆರತಿ ಅಂಕ್ಲಿಕರ್ ಅವರಿಂದ ಹಿಂದೂಸ್ತಾನಿ ಸಂಗೀತ, ಬೆಂಗಳೂರಿನ  ಗೋಪಾಲಸ್ವಾಮಿ ಮತ್ತು ತಂಡದಿಂದ ಭರತ ನಾಟ್ಯವಿರುತ್ತದೆ. ಈ ಎಲ್ಲ ಕಾರ್ಯಕ್ರಮಗಳು ಕ್ರಮವಾಗಿ ಸಂಜೆ 6 ರಿಂದ 7.30 ಹಾಗೂ  ಸಂಜೆ 7.30 ರಿಂದ  ರಾತ್ರಿ 9.30ರ ವರೆಗೆ ನಡೆಯುತ್ತವೆ.

ಸೂರ್ಯನಿಂದ ಚಂದ್ರನೆಡೆಗೆ: ಇದೇ ಮೊದಲ ಬಾರಿಗೆ ಸೂರ್ಯನಿಂದ ಚಂದ್ರನೆಡೆಗೆ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಒಂದು ಸಾವಿರ ಸ್ಥಳೀಯ ಕಲಾವಿದರು ವಿವಿಧ  ಪ್ರಕಾರಗಳ ಸಂಗೀತ ಮತ್ತು ವಾದ್ಯಮೇಳ ನಡೆಸಿಕೊಡಲಿದ್ದಾರೆ.

21 ರಂದು ಸಂಜೆ 6 ರಿಂದ 8ರ ವರೆಗೆ ಸ್ಥಳೀಯ ಕಲಾವಿದರಿಂದ ಗಾನ ನೃತ್ಯ ಕುಂಚ. ಸಂಜೆ  7.30 ರಿಂದ ರಾತ್ರಿ 9.30ರ ವರೆಗೆ ಬೆಂಗಳೂರಿನ ಶಮಿತಾ ಮಲ್ನಾಡ್ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ.
 22 ರಂದು ಸಂಜೆ 6 ರಿಂದ  7.30ರ ವರೆಗೆ ಅಂಜನಾ ಬಿ.ರಾಮ್ ಮತ್ತು ತಂಡದಿಂದ ನೃತ್ಯ ವೈವಿಧ್ಯ.
 ಸಂಜೆ 7.30 ರಿಂದ 9.30ರ ವರೆಗೆ ಮುಂಬೈನ ಡಾ.ಶಿವಕುಮಾರ್ ಶರ್ಮ ಅವರಿಂದ ಸಂತೂರ ವಾದನ.
23 ರಂದು ಸಂಜೆ 7.30 ರಿಂದ 9.30ರ ವರೆಗೆ ಮುಂಬೈನ ವಿಜಯ್ ಪ್ರಕಾಶ್ ಮತ್ತು ತಂಡದಿಂದ ಸಂಗೀತ ವೈವಿಧ್ಯ ಕಾರ್ಯಕ್ರಮಗಳು ಜರುಗಲಿವೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.