ADVERTISEMENT

ಉಪ್ಪಾರದೊಡ್ಡಿಗೆ ಶಾಸಕಿ ಭೇಟಿ: ಸಾಂತ್ವನ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 19:50 IST
Last Updated 15 ಮಾರ್ಚ್ 2011, 19:50 IST

ಮದ್ದೂರು: ಉಪ್ಪಾರದೊಡ್ಡಿಗೆ ಮಂಗಳವಾರ ಸಂಜೆ ಭೇಟಿ ನೀಡಿದ ಶಾಸಕಿ ಕಲ್ಪನಾ ಸಿದ್ದರಾಜು ಅವರು ಗ್ರಾಮದ ಶ್ರೀ ಕಾಳಮ್ಮದೇವಿ ಪರಿಷೆಯಲ್ಲಿ ಸೋಮವಾರ ವಿಷಯುಕ್ತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ಜನರ ಮನೆ ಮನೆಗೆ ತೆರಳಿ ಸಾಂತ್ವನ ಹೇಳಿದರು.

ಸ್ಥಳದಲ್ಲಿ ಹಾಜರಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅರವಿಂದಪ್ಪ ಅವರೊಡನೆ ಮಾತನಾಡಿದ ಅವರು, ನಾಳೆಯೂ ಹಬ್ಬ ಇದ್ದು, ಅಲ್ಲಿಯವರೆಗೆ ತಾತ್ಕಾಲಿಕ ವೈದ್ಯಕೀಯ ಚಿಕಿತ್ಸಾ ಶಿಬಿರ ಮುಂದುವರಿಸಿ. ಅಲ್ಲದೇ ಗ್ರಾಮದಲ್ಲಿ ಶುಚಿತ್ವ ಹಾಗೂ ನೈರ್ಮಲ್ಯ ಕಾಪಾಡಲು ಜನರಿಗೆ ಅಗತ್ಯವಾದ ಸಲಹೆ ಸೂಚನೆ ನೀಡಿರಿ. ತುರ್ತು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ವೊಂದನ್ನು ಗ್ರಾಮದಲ್ಲಿಯೇ ಇರಿಸಿ ಎಂದು ಸೂಚನೆ ನೀಡಿದರು.

ಚೇತರಿಸಿಕೊಂಡ ಜನತೆ: ಉಪ್ಪಾರದೊಡ್ಡಿಯಲ್ಲಿ ಸೋಮವಾರ ನಡೆದ ಕಾಳಮ್ಮದೇವಿ ಪರಿಷೆಯಲ್ಲಿ ಊಟ ಸ್ವೀಕರಿಸಿ ಅಸ್ವಸ್ಥರಾಗಿದ್ದ ನೂರಾರು ಮಂದಿ ಚೇತರಿಸಿಕೊಂಡು ತಾಲ್ಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಂದ ಬಿಡುಗಡೆಗೊಂಡು ಮಂಗಳವಾರ ಮನೆಗೆ ಮರಳಿದರು.

 ‘ಜನರು ಯಾವುದೇ ಆತಂಕಪಡ ಬೇಕಾದ ಅಗತ್ಯವಿಲ್ಲ. ಕಲಬೆರಕೆ ಮುಕ್ತ ಆಹಾರ ಹಾಗೂ ಶುದ್ಧ ನೀರು ಬಳಕೆಗೆ ಮುಂದಾಗಬೇಕು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಹೇಶ್‌ಕುಮಾರ್ ಜನರಲ್ಲಿ ವಿನಂತಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT