ADVERTISEMENT

ಊಟಕ್ಕಾಗಿ ಸಿಬ್ಬಂದಿ ವಾಗ್ವಾದ

ಹರಿಹರ: ರಾತ್ರಿ ಆದರೂ ಮುಗಿಯದ ಮತ ಎಣಿಕೆ ಕಾರ್ಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2015, 5:07 IST
Last Updated 6 ಜೂನ್ 2015, 5:07 IST
ಹರಿಹರದ ಎಂಕೆಇಟಿ ಶಾಲೆಯ ಕಾಂಪೌಂಡ್ ಹಾಗೂ ಶಾಲಾ ಆವರಣದಲ್ಲಿ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿರುವ ಗ್ರಾಮಸ್ಥರು.
ಹರಿಹರದ ಎಂಕೆಇಟಿ ಶಾಲೆಯ ಕಾಂಪೌಂಡ್ ಹಾಗೂ ಶಾಲಾ ಆವರಣದಲ್ಲಿ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿರುವ ಗ್ರಾಮಸ್ಥರು.   

ಹರಿಹರ: ನಗರದ ಹೊರವಲಯದ ಸೇಂಟ್ ಮೇರಿಸ್ ಶಾಲೆಯಲ್ಲಿ ತಾಲ್ಲೂಕಿನ 25 ಗ್ರಾಮ ಪಂಚಾಯ್ತಿಗಳ ಮತ ಎಣಿಕೆ ಕಾರ್ಯ ತಡವಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಚುನಾವಣಾ ಸಿಬ್ಬಂದಿಜತೆ ವಾಗ್ವಾದ, ಊಟಕ್ಕಾಗಿ ಚುನಾವಣಾ ಸಿಬ್ಬಂದಿಗಳ ಗೊಣಗಾಟ ಶುಕ್ರವಾರ ಮತ ಎಣಿಕೆ ಕೇಂದ್ರದಲ್ಲಿ ಕಂಡು ಬಂದಿತು.

ಚುನಾವಣಾ ಆಯೋಗದಿಂದ ಶಾಲೆಯ 12 ಕೊಠಡಿಗಳಲ್ಲಿ ಮತ ಎಣಿಕೆ ಕಾರ್ಯ ಬೆಳಗ್ಗೆ 8ರಿಂದ 379 ಸ್ಥಾನಕ್ಕೆ ಸ್ಪರ್ಧಿಸಿದ್ದ 964 ಅಭ್ಯರ್ಥಿಗಳ ಮತ ಎಣಿಕೆ ಕಾರ್ಯ ನಡೆಯಿತು. 59 ಅಭ್ಯರ್ಥಿಗಳು ನಾಮ ಪತ್ರ ಹಿಂಪಪಡೆದ ಹಿನ್ನೆಲೆಯಲ್ಲಿ 18 ಸ್ಥಾನಗಳಿಗೆ ಮತದಾನ ನಡೆದಿರಲಿಲ್ಲ.

ಮೊದಲ ಸುತ್ತಿನಲ್ಲಿ 12 ಗ್ರಾಮ ಪಂಚಾಯ್ತಿಯ 60 ವಾರ್ಡ್‌ಗಳ ಮತಎಣಿಕೆ ಕಾರ್ಯ ಆರಂಭಗೊಂಡು ಮಧ್ಯಾಹ್ನ 2ಕ್ಕೆ ಮುಕ್ತಾಯಗೊಂಡರೂ, ಮತದಾರರಿಗೆ ಹಾಗೂ ಅಭ್ಯರ್ಥಿಗಳಿಗೆ ಸರಿಯಾದ ಮಾಹಿತಿ ನೀಡುವಲ್ಲಿ ತಾಲ್ಲೂಕು ಚುನಾವಣಾ ಆಯೋಗ ವಿಫಲವಾಯಿತು.

ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಕಾರ್ಯಕರ್ತರು ಉತ್ಸಾಹದಿಂದ ಕೇಕೇ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಾಹನ ದಟ್ಟಣೆ ಹಾಗೂ ಶಾಂತಿಭಂಗ ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.