ADVERTISEMENT

ಎನ್‌ಎಸ್‌ಎಸ್ ಶಿಬಿರದಲ್ಲಿ ರಸ್ತೆ ದುರಸ್ತಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST
ಎನ್‌ಎಸ್‌ಎಸ್ ಶಿಬಿರದಲ್ಲಿ ರಸ್ತೆ ದುರಸ್ತಿ
ಎನ್‌ಎಸ್‌ಎಸ್ ಶಿಬಿರದಲ್ಲಿ ರಸ್ತೆ ದುರಸ್ತಿ   

ಕುಣಿಗಲ್: ವಿವಾದದಿಂದ ಹಲವು ವರ್ಷಪ್ರಗತಿ ಕಾಣದಿದ್ದ ತಾಲ್ಲೂಕಿನ ಗುನ್ನಾಗರೆ -ಮಾಯಣ್ಣಗೌಡಪಾಳ್ಯದ ರಸ್ತೆಯನ್ನು ಪಟ್ಟಣದ ಮಹಾತ್ಮಗಾಂಧಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ  ಎನ್‌ಎಸ್‌ಎಸ್ ಶಿಬಿರಾರ್ಥಿಗಳು ತಹಶೀಲ್ದಾರ್ ನೇತೃತ್ವದಲ್ಲಿ ಪರಿಹರಿಸಿ, ದುರಸ್ತಿ ಮಾಡಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಶಿಬಿರ ಸಂಪನ್ಮೂಲ ವ್ಯಕ್ತಿಯಾಗಿ ಬಂದ ತಹಶೀಲ್ದಾರ್ ಎಸ್.ಆರ್. ಕೃಷ್ಣಯ್ಯ ಅವರ ಉಪನ್ಯಾಸದ ನಂತರ ಗ್ರಾಮಸ್ಥರು, ಶಿಬಿರಾರ್ಥಿಗಳು ಗುನ್ನಾಗರೆಯಿಂದ ಮಾಯಣ್ಣಗೌಡನಪಾಳ್ಯಕ್ಕೆ ಹೋಗುವ ರಸ್ತೆ ವಿಚಾರವಾಗಿ ಎರಡು ಗುಂಪುಗಳ ನಡುವೆ ವಿವಾದ ಉಂಟಾಗಿ ಹಲವು ವರ್ಷಗಳಿಂದ ದುರಸ್ತಿಯಾಗದೆ ಸಂಚಾರ ದುಸ್ತರವಾಗಿರುವುದರ ಬಗ್ಗೆ ಗಮನ ಸೆಳೆದರು. ಈ ಬಗ್ಗೆ ವಿದ್ಯಾರ್ಥಿಗಳ ಮನವಿ ಮೇರೆಗೆ ತಹಶೀಲ್ದಾರ್ ಅವರು ಗ್ರಾಮದ ಎರಡೂ ಗುಂಪುಗಳನ್ನು ಕರೆಸಿ, ಚರ್ಚಿಸಿ ಮನವೊಲಿಸಿ ರಸ್ತೆ ದುರಸ್ತಿಗೆ ಒಪ್ಪಿಸಿದರು.

ವಿವಾದ ಬಗೆಹರಿದ ಹಿನ್ನೆಲೆಯಲ್ಲಿ ಸಂತಸಗೊಂಡಿದ್ದ ವಿದ್ಯಾರ್ಥಿಗಳು ಗ್ರಾಮಸ್ಥರ ಸಹಕಾರದೊಂದಿಗೆ ಒಂದೇ ದಿನದಲ್ಲಿ ರಸ್ತೆ ನಿರ್ಮಿಸಿದರು. ಎನ್‌ಎಸ್‌ಎಸ್‌ನಿಂದ ನಿರ್ಮಿಸಲಾದ ಈ ರಸ್ತೆ ಬಗ್ಗೆ ಯಾವುದೇ ಗುತ್ತಿಗೆದಾರರು, ಜನಪ್ರತಿನಿಧಿಗಳು ತಾವು ಮಾಡಿಸಿದ್ದಾಗಿ ಬಿಲ್ ಪಡೆದುಕೊಳ್ಳದಂತೆ ಎಚ್ಚರಿಕೆ ವಹಿಸುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದರು. ಶಿಬಿರಾಧಿಕಾರಿ ಕುಮಾರಯ್ಯ, ಸರ್ಕಾರಿ ನೌಕರರ ಸಂಘ ಕಾರ್ಯದರ್ಶಿ ಗೋಪಾಲ್, ಉಪನ್ಯಾಸಕ ವಿನೋದ್‌ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.