ರಾಣೆಬೆನ್ನೂರ (ಹಾವೇರಿ ಜಿಲ್ಲೆ): ತಾಲ್ಲೂಕಿನ ಚಳಗೇರಿ ಗ್ರಾಮದ ಹೊಲವೊಂದರಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಮೂವರು ಕಾರ್ಮಿಕರ ಮೈಮೇಲೆ ಕಲ್ಲು ಬಿದ್ದು ಇಬ್ಬರು ಮೃತಪಟ್ಟು, ಒಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಮೃತರನ್ನು ಚಳಗೇರಿ ಗ್ರಾಮದ ಸುರೇಶ ನಿಂಗಪ್ಪ ತಳವಾರ (35), ಮೆಹಬೂಬ್‌ಸಾಬ್ ಜಮಾಲ್‌ಸಾಬ್ ಅಗಸಿಬಾಗಿಲು (48) ಎಂದು ಗುರುತಿಸಲಾಗಿದೆ. ರಾಮಪ್ಪ ದಾಸಪ್ಪ ಮೆಡ್ಲೇರಿ ಗಾಯಗೊಂಡಿದ್ದು, ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.