ADVERTISEMENT

ಕೊಪ್ಪಳ: ವಿಜ್ಞಾನ ವಸ್ತು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 18:30 IST
Last Updated 15 ಫೆಬ್ರುವರಿ 2011, 18:30 IST

ಕೊಪ್ಪಳ: ಇಲ್ಲಿನ ವಿಠ್ಠಲ ಮಾದರಿ ನಗರದಲ್ಲಿರುವ ನಿವೇದಿತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ವಿಜ್ಞಾನ ವಸ್ತು ಹಾಗೂ ಪಾಠೋಪಕರಣ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.ತಾಲ್ಲೂಕಿನ ಹಿರೇಸಿಂದೋಗಿ ಗ್ರಾಮದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಭಾರ  ಪ್ರಾಚಾರ್ಯ ಹನುಮಂತಪ್ಪ ಅಂಡಗಿ ಪ್ರದರ್ಶನವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಮನೋಭಾವ ಹಾಗೂ ಚಿಕಿತ್ಸಕ ಬುದ್ಧಿಯನ್ನು ಉತ್ತೇಜಿಸುತ್ತವೆ ಎಂದು ಹೇಳಿದರು.ನೀರಿಗೆ ಬೆಂಕಿ ಹಚ್ಚುವುದು, ತೆಂಗಿನಕಾಯಿ ಒಳಗೆ ಹೂವು ತೋರಿಸುವುದರ ಮೂಲಕ ವಿದ್ಯಾರ್ಥಿಗಳು ನಡೆಸಿಕೊಟ್ಟ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಗಮನ ಸೆಳೆಯಿತು.

ಗುಬ್ಬಚ್ಚಿ ಗೂಡು, ಗ್ರಹಗಳು ರಾಶಿಯಿಂದ ರಾಶಿಗೆ ಚಲಿಸುತ್ತಿರುವುದು, ಮರದ ವಯಸ್ಸು ಗುರುತಿಸುವುದು, ಬಲೂನುಗಳ ಮೂಲಕ ಗಾಳಿಗೆ ತೂಕವಿದೆ ಎಂಬುದನ್ನು ವಿವರಿಸುವ ಮಾದರಿಗಳನ್ನು  ಪ್ರದರ್ಶಿಸಲಾಯಿತು.  ಶಾಲೆಯ ಅಧ್ಯಕ್ಷೆ ಶಾರದಾಬಾಯಿ ಪುಲಸ್ಕರ, ಕಾರ್ಯದರ್ಶಿ ವೆಂಕಟೇಶ ಪುಲಸ್ಕರ,   ಶಿಕ್ಷಕರಾದ ಪ್ರಾಣೇಶಗೌಡ ಮಾಲಿಪಾಟೀಲ, ಸುರೇಶ ಕಿನ್ನಾಳ, ಶ್ರೀನಿವಾಸ ಬಡಿಗೇರ, ಅಜೀಜ ರೇವಡಿ, ಬಸವರಾಜೇಶ್ವರಿ ಬೇನಾಳಮಠ,ವಿದ್ಯಾವತಿ ಕುಡಗುಂಟಿ, ಸುನಂದ ಕೋಟೆ, ಪೂರ್ಣಿಮಾ ಶೆಟ್ಟರ, ಕೆ.ಸುರೇಶ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.