
ಪ್ರಜಾವಾಣಿ ವಾರ್ತೆಚಾಮರಾಜನಗರ: ತಾಲ್ಲೂಕಿನ ಮೂಟಿಪಾಳ್ಯ ಗ್ರಾಮದ ತೋಟದ ಮನೆಯಲ್ಲಿ ಯುವಕರಿಬ್ಬರು ಗೃಹಿಣಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಮೂಟಿಪಾಳ್ಯ ಗ್ರಾಮದ ರುದ್ರ ಹಾಗೂ ಯೋಗೇಶ್ ಅತ್ಯಾಚಾರ ಎಸಗಿದ ಆರೋಪಿಗಳು. ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ ವಾಸವಾಗಿದ್ದ 38 ವರ್ಷದ ಮಹಿಳೆ ಮೇಲೆ ಈ ಇಬ್ಬರೂ ಮಂಗಳವಾರ ರಾತ್ರಿ ಅತ್ಯಾಚಾರ ಎಸಗಿದ್ದಾರೆ. ಮಂಗಳವಾರ ಕೆಲಸದ ನಿಮಿತ್ತ ಆಕೆಯ ಪತಿ ಆಂಧ್ರಕ್ಕೆ ಹೋಗಿದ್ದರು. ಇದೇ ಸಮಯ ನೋಡಿಕೊಂಡ ಆರೋಪಿಗಳು ತೋಟದ ಮನೆಗೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಪತಿ ಮರಳಿ ಮನೆಗೆ ಬಂದ ಮೇಲೆ ವಿಷಯ ಬಹಿರಂಗವಾಗಿದೆ. ಈ ಬಗ್ಗೆ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.