ADVERTISEMENT

ಚಿರತೆ ಚರ್ಮ ಕಳ್ಳ ಸಾಗಣೆ: ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ಕೊಳ್ಳೇಗಾಲ: ಚಿರತೆ ಚರ್ಮ ಕಳ್ಳ ಸಾಗಣೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಮಂಗಳವಾರ ವಿಶೇಷ ಅರಣ್ಯ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಗೂಳ್ಯದ ಸೋಮಣ್ಣ ಮತ್ತು ಪೆದ್ದನ ಪಾಳ್ಯದ ಕುಮಾರ ಬಂಧಿತರು. ತಾಲ್ಲೂಕಿನ ಗೂಳ್ಯ ಅರಣ್ಯ ಪ್ರದೇಶದಲ್ಲಿ ಚಿರತೆ ಚರ್ಮ ಕಳ್ಳ ಸಾಗಣೆ ಮಾಡುವ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ಅಧಿಕಾರಿ ಅನ್ವರ್‌ಕರ್ ಮಾರ್ಗದರ್ಶನದಲ್ಲಿ ಸಬ್ ಇನ್‌ಸ್ಪೆಕ್ಟರ್ ಎಂ.ರಾಜಶೇಖರ ಮತ್ತು ತಂಡ ಕಾರ್ಯಾಚರಣೆ ಕೈಗೊಂಡರು. ಚಿರತೆ ಚರ್ಮ ಕೊಳ್ಳುವ ವ್ಯಾಪಾರಿಗಳ ಸೋಗಿನಲ್ಲಿ ಗೂಳ್ಯ ಗ್ರಾಮದ ತಟ್ಟೆಹಳ್ಳದ ಬಳಿ ಆರೋಪಿಗಳನ್ನು ಭೇಟಿ ಮಾಡಿ ಚಿರತೆ ಚರ್ಮದ ಸಮೇತ ಇಬ್ಬರನ್ನು ಬಂಧಿಸಿ, ನಾಡ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.

ಚರತೆ ಚರ್ಮ, ಆರೋಪಿಗಳನ್ನು ಹನೂರು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ದಾಳಿಯಲ್ಲಿ ಅರಣ್ಯ ಸಂಚಾರ ದಳದ ಜಯಶಂಕರ್, ಲಿಂಗರಾಜು, ರಾಘವೇಂದ್ರ, ಶ್ರೀಕಂಠಸ್ವಾಮಿ ಪ್ರಕಾಶ್ ಹಾಗೂ ಲಿಂಗರಾಜಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.