ADVERTISEMENT

ಛಾವಣಿ ಕುಸಿದು ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ಚಿಂತಾಮಣಿ: ಮನೆ ಮುಂದಿನ ಛಾವಣಿಯ ಸಜ್ಜಾ ಕಲ್ಲು ಮುರಿದುಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಕೆಂಚಾರ‌್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಂಗಿಮಾಳ್ಳು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

 ಆಂಜನೇಯರೆಡ್ಡಿ (35), ಸಿರೀಶ (8) ಮೃತಪಟ್ಟವರು. ಗುರುವಾರ ರಾತ್ರಿ ಊಟ ಮಾಡಿದ ಆಂಜನೇಯರೆಡ್ಡಿ ಮತ್ತು ಅವರ ತಮ್ಮನ ಮಗಳು ಸಿರೀಶ ಬೇಸಿಗೆ ಸೆಕೆ ಕಾರಣ ಮನೆಯ ಮುಂದೆ ಮಲಗಿದ್ದರು.
 
ಇದು ಹಳೆ ಮನೆಯಾಗಿದ್ದು, ಮುಂದೆ ಹಾಕಿರುವ ಒಪ್ಪಾರದ ಸಜ್ಜಾ ಮುರಿದಿರುವುದರಿಂದ ಛಾವಣಿಯ ಕಲ್ಲು ಚಪ್ಪಡಿಗಳು ಮೇಲೆ ಬಿದ್ದು, ಮಲಗಿದ್ದ ಆಂಜನೇಯರೆಡ್ಡಿ ಮತ್ತು ಸಿರೀಶ ಸ್ಥದಲ್ಲೇ ಮೃತಪಟ್ಟಿದ್ದಾರೆ. ಕೆಂಚಾರ‌್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.