ADVERTISEMENT

ತಹಶೀಲ್ದಾರ್ ನೇತೃತ್ವದಲ್ಲಿ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಪಾಂಡವಪುರ: ಪಟ್ಟಣ ಪಂಚಾಯಿತಿಗೆ ಸೇರಿದ ಜಾಗದ ಒತ್ತುವರಿಯನ್ನು ಉಪ ವಿಭಾಗಾಧಿಕಾರಿ ಜಿ. ಪ್ರಭು, ತಹಶೀಲ್ದಾರ್ ಬಿ.ಸಿ. ಶಿವಾನಂದಮೂರ್ತಿ ನೇತೃತ್ವದಲ್ಲಿ ಬುಧವಾರ ತೆರವುಗೊಳಿಸಲಾಯಿತು.

ಪಟ್ಟಣದ ಹೃದಯ ಭಾಗದಲ್ಲಿರುವ ಡಾ. ರಾಜ್‌ಕುಮಾರ್ ಸರ್ಕಲ್‌ಗೆ ಹೊಂದಿಕೊಂಡ ಜಾಗವನ್ನು ಪುರಸಭೆ ಮಾಜಿ ಅಧ್ಯಕ್ಷ ಕುಂಟೇಗೌಡ ಕುಟುಂಬ ಒತ್ತುವರಿ ಮಾಡಿಕೊಂಡಿತ್ತು.ಒಟ್ಟು 14 ಸಾವಿರ ಚದರ ಅಡಿಯ ಪ್ರದೇಶದ ಒತ್ತುವರಿಯನ್ನು ಅಧಿಕಾರಿಗಳು ಮುಂದೆ ನಿಂತು ತೆರವುಗೊಳಿಸಿದರು.

ಸುಮಾರು 50 ವರ್ಷದ ಹಿಂದೆ ಒತ್ತುವರಿ ಆಗಿದ್ದ ಈ ಜಾಗ ತಮಗೆ ಸೇರಬೇಕು ಎಂದು ಕುಂಟೇಗೌಡ ಕುಟುಂಬದವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಬಳಿಕ ಉಪ ವಿಭಾಗಾಧಿಕಾರಿ ನ್ಯಾಯಾಲಯದ ಮೊರೆ ಹೋಗಿ ಅದು ಪಟ್ಟಣ ಪಂಚಾಯಿತಿಗೆ ಸೇರಿದ ಜಾಗ ಎಂದು ವಾದಿಸಿದ್ದರು. ಕೊನೆಗೆ ಪಟ್ಟಣ ಪಂಚಾಯಿತಿ ಪರ ತೀರ್ಪು ಬಂದಿತ್ತು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಸ್. ಸಿದ್ದೇಗೌಡ, ಮುಖ್ಯಾಧಿಕಾರಿ ಬಿ.ಎಸ್. ಸುಮತಿ, ಯೋಜನಾಧಿಕಾರಿ ರಾಜು, ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಟಿ. ಚಂದ್ರಶೇಖರ್, ಸಬ್ ಇನ್ಸ್‌ಪೆಕ್ಟರ್ ಕೆ.ಎಂ.ಮಂಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.