ADVERTISEMENT

ತುಮಕೂರು: ಸಂಭ್ರಮದ ಈದ್-ಮಿಲಾದ್ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:30 IST
Last Updated 16 ಫೆಬ್ರುವರಿ 2011, 18:30 IST

ತುಮಕೂರು: ಪ್ರವಾದಿ ಮಹಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಮುಸ್ಲಿಂ ಬಾಂಧವರು ಬುಧವಾರ ನಗರದಲ್ಲಿ ಈದ್-ಮಿಲಾದ್ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಶಾಂತಿನಗರದಿಂದ ಆರಂಭವಾದ ಮೆರವಣಿಗೆ ಬನಶಂಕರಿ ಮೂಲಕ ನಜರಾಬಾದ್, ಟಿಪ್ಪು ನಗರ, ಕುರಿಪಾಳ್ಯ, ಲೇಬರ್ ಕಾಲೋನಿ, ಪೂರ್‌ಹೌಸ್ ಕಾಲೋನಿ, ಈದ್ಗಾ ಮೊಹಲ್ಲಾ, ಬಿ.ಜಿ.ಪಾಳ್ಯ ವೃತ್ತ, ಗುಬ್ಬಿ ಗೇಟ್, ಸಂತೆಪೇಟೆ, ಮಂಡಿಪೇಟೆ, ಮಾರ್ಕೆಟ್, ಗುಂಚಿ ಸರ್ಕಲ್, ಶ್ರೀರಾಮನಗರ, ಬಾರ್‌ಲೈನ್, ಬಿ.ಎಚ್.ರಸ್ತೆಯಲ್ಲಿ ಸಾಗಿ ಈದ್ಗಾ ಮೈದಾನದಲ್ಲಿ ಕೊನೆಗೊಂಡಿತು.

ಮುಸ್ಲಿಂ ಧರ್ಮ ಗುರುಗಳು, ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಈದ್-ಮಿಲಾದ್ ಅಂಗವಾಗಿ ಬಡವರಿಗೆ ವಿವಿಧೆಡೆ ಅನ್ನದಾನ ನಡೆಸಲಾಯಿತು. ಸಂಜೆ ಈದ್ಗಾ ಮೈದಾನದಲ್ಲಿ ಧರ್ಮ ಗುರುಗಳು ಧಾರ್ಮಿಕ ಬೋಧನೆ ಮಾಡಿ, ಶಾಂತಿ ಮತ್ತು ಸಾಮರಸ್ಯದ ಸಂದೇಶ ಸಾರಿದರು. ಮುಖಂಡರಾದ ಎಸ್.ಶಫಿ ಅಹಮದ್, ಡಾ.ರಫೀಕ್ ಅಹಮದ್, ನಯಾಜ್ ಅಹಮದ್, ಮಹಬೂಬ್ ಪಾಷ, ಅಪ್ಸರ್ ಅಹಮದ್, ಮಹಮದ್ ನೂರುಲ್ಲಾ ಹಾಗೂ ಇನ್ನಿತರರು ಇದ್ದರು. ನಜರಾಬಾದ್ ವೃತ್ತದಲ್ಲಿ ಗಾಯಕರಾದ ತೌಸಿಫ್ ಮತ್ತು ಫರ್ಜಾನ್ ಕವ್ವಾಲಿ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.