ADVERTISEMENT

ಪಟಾಕಿ ಸಿಡಿದು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2012, 18:55 IST
Last Updated 16 ನವೆಂಬರ್ 2012, 18:55 IST

ಮೈಸೂರು:  ಪಟಾಕಿ ಸಿಡಿಸಲು ಹೋದ ಬಾಲಕ ಮೃತಪಟ್ಟ ಮೃತಪಟ್ಟ ಘಟನೆ ನಂಜನಗೂಡು ತಾಲ್ಲೂಕಿನ ಹೆಡಿಯಾಲದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಮೋಟರ್ ಮೆಕ್ಯಾನಿಕ್ ಸಿಕಂದರ್ ಅವರ ಪುತ್ರ ಸಾಧಿಕ್ ಪಾಷಾ (9) ಮೃತಪಟ್ಟವನು. ಸಾಧಿಕ್ ಸಂಜೆ 6 ಗಂಟೆಗೆ ಪಟಾಕಿ ಸಿಡಿಸುತ್ತಿದ್ದ. ಪಟಾಕಿ ನಂತರ ಅಟಂಬಾಂಬ್ ಹಚ್ಚಿ ಅದರ ಮೇಲೆ ಸ್ಟೀಲ್ ಲೋಟ ಮುಚ್ಚಿದ್ದಾನೆ. ಅದು ಸಿಡಿಯದ ಕಾರಣ ಹತ್ತಿರ ಹೋಗಿ ಲೋಟ ತೆಗೆಯಲು ಪ್ರಯತ್ನಿಸಿದ್ದಾನೆ. ಅದೇ ವೇಳೆಗೆ ಅಟಂಬಾಂಬ್ ಸಿಡಿದಿದೆ.

ಪರಿಣಾಮವಾಗಿ ಮುಚ್ಚಿಟ್ಟ ಸ್ಟೀಲ್ ಲೋಟ ಬಾಲಕನ ಕುತ್ತಿಗೆಯನ್ನು ತೀವ್ರ ಗಾಯಗೊಳಿಸಿತು. ಪೋಷಕರು ಕೂಡಲೇ ಚಿಕಿತ್ಸೆಗಾಗಿ ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾದರು. ಅಷ್ಟರಲ್ಲಿ ಸಾಧಿಕ್ ಮೃತಪಟ್ಟನು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.