ಉಡುಪಿ: `ರಾಜ್ಯದಲ್ಲಿ ವೃತ್ತಿಪರ ಛಾಯಾಗ್ರಾಹಕರ ಪ್ರಾಮುಖ್ಯತೆ ಮನಗಂಡು `ಕರ್ನಾಟಕ ಫೋಟೋ ಅಕಾಡೆಮಿ~ ಸ್ಥಾಪನೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಇಂಗಿವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಎಸ್. ಆಚಾರ್ಯ ಇಲ್ಲಿ ವ್ಯಕ್ತಪಡಿಸಿದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಭಾನುವಾರ ಆಯೋಜಿಸಿದ್ದ ಸಂಘದ 21ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
`ವೃತ್ತಿಪರ ಛಾಯಾಗ್ರಾಹಕರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಬದ್ಧ. ನಮ್ಮದು ಅತಿ ಹೆಚ್ಚು ಅಕಾಡೆಮಿಹೊಂದಿರುವ ರಾಜ್ಯ. ಈಗ ಸುಮಾರು 11 ಅಕಾಡೆಮಿಗಳಿದ್ದು 12ನೆ ಅಕಾಡೆಮಿಯಾಗಿ `ಕರ್ನಾಟಕ ಫೋಟೋ ಅಕಾಡೆಮಿ~ ಸ್ಥಾಪಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು~ ಎಂದರು.
`ಈ ಭಾಗದಲ್ಲಿ ಸುಮಾರು 2600 ಮಂದಿ ವೃತ್ತಿಪರ ಛಾಯಾಗ್ರಾಹಕರಿದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಿ ಅಗತ್ಯ ನೆರವು ಕಲ್ಪಿಸಿಕೊಡಲು ಸರ್ಕಾರ ಪ್ರಯತ್ನಿಸಲಿದೆ~ ಎಂದರು.
ಸಂಘದ ಅಧ್ಯಕ್ಷ ಶಿವರಾಮ ಕಡಬ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರಘುಪತಿ ಭಟ್, ಎಸ್‌ಕೆಪಿಎ ಸಲಹಾ ಸಮಿತಿ ಅಧ್ಯಕ್ಷ ವಿಠಲ ಚೌಟ, ಪ್ರಧಾನ ಕಾರ್ಯದರ್ಶಿ ಜಗದೀಶ್ ಜೈನ್, ದಾಮೋದರ್ ಜೈನ್, ಜಗದೀಶ್ ಶೇಣವ, ಕೆಪಿಎ ಅಧ್ಯಕ್ಷ ಶಶಿಧರ್, ಉಪಾಧ್ಯಕ್ಷ ಅಶೋಕ್ ಕುಮಾರ್, ವಾಸುದೇವ ರಾವ್, ಹರೀಶ್ ರಾವ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.