ADVERTISEMENT

ಬಾಲಕಾರ್ಮಿಕ ಪದ್ಧತಿಯಿಂದ ಭವಿಷ್ಯ ಮಸಕು

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST

ಕುಷ್ಟಗಿ: ಕಂದಕೂರು ಗ್ರಾಮದಲ್ಲಿ ಸೋಮವಾರ `ಬಾಲಕಾರ್ಮಿಕ ಪದ್ಧತಿ ವಿರೊಧಿ ದಿನ~ ಆಚರಿಸಲಾಯಿತು.
ಯುನಿಸೆಫ್, ಮಕ್ಕಳ ಹಕ್ಕುಗಳ ರಕ್ಷಣಾ ಯೋಜನೆ ಮತ್ತು ಸ್ಥಳೀಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಎಸ್‌ಡಿಎಂಸಿ ಸದಸ್ಯ ಹೊಳಿಯಪ್ಪ ಹಲಗಿ ಉದ್ಘಾಟಿಸಿದರು.

ಮಕ್ಕಳ ಹಕ್ಕುಗಳ ರಕ್ಷಣಾ ಸಂಘಟಕ ಹನುಮಂತಪ ಬಿಜಕಲ್, ಶಿಕ್ಷಕ ರಾಜಾಸಾಬ್ ನದಾಫ್ ಮಾತನಾಡಿ, ಮಕ್ಕಳನ್ನು ದುಡಿಮೆಗೆ ಕಳುಹಿಸುವುದರಿಂದ ಅವರ ಭವಿಷ್ಯ ಮಸಕಾಗುತ್ತದೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ ಅವರ ಶೈಕ್ಷಣಿಕ ಬೆಳವಣಿಗೆಗೆ ಪ್ರಯತ್ನಿಸಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಹಾಲಪ್ಪ ಹೂಗಾರ, ಪ್ರಭಾರ ಮುಖ್ಯಶಿಕ್ಷಕ ನಿಂಗಪ್ಪ ಗುನ್ನಾಳ, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಶಿಲ್ಪಾ ಅಂಗಡಿ ಮತ್ತು ಶಿಕ್ಷಕರು, ಮಕ್ಕಳು, ಗ್ರಾಮದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿಂಗಪ್ಪ ಗುನ್ನಾಳ ಸ್ವಾಗತಿಸಿದರು. ಸಹಶಿಕ್ಷಕ ಮಂಜುನಾಥ ರೂಪಿಸಿದರು. ಶಶಿಕಾಂತ      ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.