ADVERTISEMENT

ಮಂತ್ರಾಲಯದಲ್ಲಿ ಚಿನ್ನದ ರಥೋತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 391ನೇ ಪಟ್ಟಾಭಿಷೇಕ ಮತ್ತು 417ನೇ ವರ್ಧಂತ್ಯುತ್ಸವ ಅಂಗವಾಗಿ `ಶ್ರೀ ರಾಘವೇಂದ್ರ ಗುರುಭಕ್ತಿ ಉತ್ಸವ~ವು ಗುರುವಾರ ಆರಂಭಗೊಂಡಿತು.

ಮೊದಲ ದಿನವಾದ ಗುರುವಾರ ಮುಂಜಾನೆ ಮಠದ ಪೀಠಾಧಿಪತಿ ಶ್ರೀ ಸುಯತೀಂದ್ರತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪಾದುಕೆ ಪಟ್ಟಾಭಿಷೇಕ ಮತ್ತು ಚಿನ್ನದರಥೋತ್ಸವನಡೆಯಿತು.ಚಿನ್ನದಪಲ್ಲಕ್ಕಿಉತ್ಸವಶ್ರೀಮಠದಪ್ರಾಕಾರದಲ್ಲಿ ಡೆಯಿತು.

ರಾಯರ ಪಟ್ಟಾಭಿಷೇಕ ಉತ್ಸವ ಅಂಗವಾಗಿ ನಸುಕಿನ ಜಾವ ರಾಯರ ಅಷ್ಟೋತ್ತರ ಪಾರಾಯಣ, ಹರಿಕಥಾಮೃತಸಾರ ಮತ್ತು ಲಕ್ಷ್ಮೀಶೋಭನ ಪಾರಾಯಣ, ಗ್ರಾಮ ಪ್ರದಕ್ಷಿಣೆ, ಶ್ರೀಮಠದ ಪೀಠಾಧಿಪತಿಗಳಿಂದ ಮೂಲರಾಮದೇವರ ಪೂಜೆ ನಡೆಯಿತು.

ADVERTISEMENT

ರಾಘವೇಂದ್ರ ವಿಜಯ ಕುರಿತು ಡಾ.ಮಣಕರಿ ಶ್ರೀನಿವಾಸ ಆಚಾರ್ಯರಿಂದ ಪ್ರವಚನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳುನಡೆದವು.

ಬೆಳಿಗ್ಗೆರಾಘವೇಂದ್ರಸ್ವಾಮಿಗಳ ಪಾದುಕೆಪಟ್ಟಾಭಿಷೇಕಮತ್ತುಚಿನ್ನದ ರಥೋತ್ಸವ,ಪಲ್ಲಕ್ಕಿಉತ್ಸವನಡೆಯಿತು. ಪೀಠಾಧಿಪತಿಗಳ ಹೆಚ್ಚುವರಿ ಆಪ್ತಕಾರ್ಯದರ್ಶಿಸುಯಮೀಂದ್ರಾಚಾರ್, ಆಡಳಿತಾಧಿಕಾರಿ ರೊದ್ದಂ ಪ್ರಭಾಕರರಾವ್, ಎನ್.ವಾದಿರಾಜಾಚಾರ್, ಡಿ.ಎಂ. ಆನಂದರಾವ್, ಎಎಒ ಮಾಧವಶೆಟ್ಟಿ ಇತರರು ಇದ್ದರು. ಆಂಧ್ರ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.