ADVERTISEMENT

ಮಧೂರು ದೇವಾಲಯ: 2.5 ಕೋಟಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 19:30 IST
Last Updated 13 ಏಪ್ರಿಲ್ 2012, 19:30 IST

ಕಾಸರಗೋಡು: ಉತ್ತರ ಕೇರಳದ ಅತ್ಯಂತ ಪ್ರಸಿದ್ಧ ಕ್ಷೇತ್ರವಾಗಿರುವ ಮಧೂರು ಸಿದ್ಧಿವಿನಾಯಕ ಶ್ರೀ ಮದನಂತೇಶ್ವರ ದೇವಸ್ಥಾನದಲ್ಲಿ ರೂ.2.5ಕೋಟಿ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಭಕ್ತರು ಇಷ್ಟದೇವರಿಗೆ ಕಾಣಿಕೆ ರೂಪದಲ್ಲಿ ಅರ್ಪಿಸಿದ ಆಭರಣಗಳೇ ಕಾಣೆಯಾಗಿವೆ. ಲೆಕ್ಕಪತ್ರ ವಿಭಾಗ ವಾರ್ಷಿಕ ತಪಾಸಣೆ ನಡೆಸಿದಾಗ ಕೋಟ್ಯಂತರ ಮೌಲ್ಯದ ಆಭರಣ ಕಾಣೆಯಾಗಿರುವುದು ಗೊತ್ತಾಗಿದೆ.
ಮಾರ್ಚ್ ಮೂರನೇ ವಾರದಲ್ಲಿ ದೇವಾಲಯದ ಕ್ಷೇತ್ರದ ಲೆಕ್ಕ ಪತ್ರಗಳ ಪರಿಶೀಲನೆ ನಡೆದಿತ್ತು. ಕಾಣೆಯಾದ ಆಭರಣಗಳ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.

ಆದರೆ ದೇವಸ್ಥಾನದ ದೈನಂದಿನ ದೇವರ ಪೂಜೆಗೆ ಬಳಸುವ ಆಭರಣ, ಅಮೂಲ್ಯ ಸಾಮಗ್ರಿಗಳು ನಾಪತ್ತೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.